
ವಿಜಯದಶಮಿ ಪಥಸಂಚಲನ
Monday, October 21, 2024
ಮಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಂಗಳೂರು ಮಹಾನಗರ ಇದರ ವಿಜಯದಶಮಿ ಪಥಸಂಚಲನ ಭಾನುವಾರ ನಡೆಯಿತು.
ಕೆನರಾ ಪ್ರೌಢ ಶಾಲೆ ಡೊಂಗರಕೇರಿಯಲ್ಲಿ ಸಂಪತಗೊಂಡ ಸ್ವಯಂ ಸೇವಕರು ಕಾರ್‌ಸ್ಟ್ರೀಟ್ ಮಾರ್ಗವಾಗಿ ಪಥಸಂಚಲನ ನಡೆಸಿದರು. ಸಂಘ ಶತಾಬ್ದಿ ವರ್ಷಕ್ಕೆ ಕಾಲಿಟ್ಟ ಈ ಸಂಧರ್ಭದಲ್ಲಿ ಸಾಮಾಜಿಕ ಪಂಚ ಪರಿವರ್ತನೆ ಗುರಿಯನ್ನು ಇರಿಸಿಕೊಂಡು ಮುಂದಿನ ಒಂದು ವರ್ಷದಲ್ಲಿ ಎಲ್ಲ ಸ್ವಯಂ ಸೇವಕರು ಸಮಾಜದ ಪ್ರತಿಯೊಬ್ಬ ನಾಗರಿಕರ ಸಹಯೋಗದೊಂದಿಗೆ ಕಾರ್ಯ ಚಟುವಟಿಕೆಯಲ್ಲಿ ಒಂದೇ ದಿಕ್ಕಿನ ಕಡೆ ನಡೆಯುವ ಸಂಕಲ್ಪವನ್ನು ವ್ಯಕ್ತಪಡಿಸಿದರು. ಸುಮಾರು 1500ಕ್ಕೂ ಅಧಿಕ ಸ್ವಯಂ ಸೇವಕರು ಭಾಗವಹಿಸಿದರು.