
ವೇಣೂರು ವಿದ್ಯೋದಯ ಶಾಲೆಯಲ್ಲಿ ‘ನಿರ್ಮಲ ಚಿತ್ತ ಲಹರಿ’ ಕವನ ಸಂಕಲನ ಬಿಡುಗಡೆ
Monday, October 21, 2024
ಉಜಿರೆ: ವೇಣೂರಿನ ವಿದ್ಯೋದಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅ.19 ರಂದು ಹತ್ತನೇ ತರಗತಿಯ ವಿದ್ಯಾರ್ಥಿ ನಿರಂಜನ ಶಿವಾನಂದ ಅಗಸಿಮನಿ ರಚಿಸಿದ ಕವನ ಸಂಕಲನ ‘ನಿರ್ಮಲ ಚಿತ್ತ ಲಹರಿ’ಯನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್ ವಿಭಾಗದ ಸಹಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಭಟ್ ಬಿಡುಗಡೆಗೊಳಿಸಿದರು.
ಕವನ ಸಂಕಲನವನ್ನು ಕೋಣಾಲಿನ ಸರಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕಿ ಸುಪ್ರೀತಾ ಚರಣ್ ಅವರು ಮಾಡಿದ್ದು, ಶಾಲಾ ಸಂಚಾಲಕಿ ಶೀಲಾ ಎಸ್ ಹೆಗ್ಡೆ ಅವರು ಪರಿಚಯಿಸಿ ಶುಭಾಶಂಸನೆಗೈದರು. ಇದೇ ಸಂದರ್ಭದಲ್ಲಿ ಭಾರತೀಯ ಭೂಸೇನೆಗೆ ಅಗ್ನಿವೀರ್ ಯೋಜನೆಯಲ್ಲಿ ಸೇರ್ಪಡೆಯಾದ ಶಾಲೆಯ ಹಳೆ ವಿದ್ಯಾರ್ಥಿ ಯಂ.ಜಿ. ಮಣಿಕಂಠರವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಶಾಲಾ ಮುಖ್ಯ ಪ್ರಬಂಧಕ ಕೆ. ಶಿವರಾಮ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದು, ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪ್ರಶಾಂತ್, ಉಪಾಧ್ಯಕ್ಷ ರಾಜೇಶ್ ಮೂಡುಕೋಡಿ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಸುಜಾತ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಪೋಷಕರು ಹಾಗೂ ಊರಿನ ಪ್ರಮುಖರು ಭಾಗವಹಿಸಿದ್ದರು.