ಜೆ.ಎಫ್. ಬಜಾಲ್ ಅಸೋಸಿಯೇಷನ್ ಅಧ್ಯಕ್ಷರಾಗಿ ಅಹಮದ್ ಕುರೈಶ್ ಆಯ್ಕೆ

ಜೆ.ಎಫ್. ಬಜಾಲ್ ಅಸೋಸಿಯೇಷನ್ ಅಧ್ಯಕ್ಷರಾಗಿ ಅಹಮದ್ ಕುರೈಶ್ ಆಯ್ಕೆ

ಮಂಗಳೂರು: ಜೆ.ಎಫ್. ಬಜಾಲ್ ಅಸೋಸಿಯೇಷನ್ ಇದರ ಕಾರ್ಯಕಾರಿಣಿ ಸಮಿತಿ ಸಭೆ ಸೋಮವಾರ ಇಲ್ಲಿನ ಜೆ.ಎಫ್. ಬಜಾಲ್ ನಂತೂರ್ ಸಭಾಂಗಣದಲ್ಲಿ ಇಂದು ಜರಗಿತು.
ಸಭೆಯಲ್ಲಿ 2024-25ನೇ ಸಾಲಿನ ನೂತನ ಸಮಿತಿ ರಚಿಸಲಾಯಿತು.
ಜೆ.ಎಫ್. ಬಜಾಲ್ ನಂತೂರ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅಹ್ಮದ್ ಕುರೈಶ್, ಉಪಾಧ್ಯಕ್ಷರುಗಳಾಗಿ ಸೌಕತ್ ಇಬ್ರಾಹೀಂ, ಅಬ್ದುಲ್ ಜಬ್ಬಾರ್, ನಾಸೀರ್ ಕೆಳಗಿನ ಮನೆ, ಯು.ಪಿ. ವಾಸಿಂ, ಪ್ರಧಾನ ಕಾರ್ಯದರ್ಶಿಯಾಗಿ ಹಕೀಝ್ ಶಾಂತಿನಗರ್, ಕೋಶಾಧಿಕಾರಿಯಾಗಿ ನೌಶಾದ್ ಎಚ್.ಎಸ್., ಕಾರ್ಯದರ್ಶಿಗಳಾಗಿ ಹಾರೀಶ್ ಫೈಝಲ್ ನಗರ, ಉಮರ್ ಫಾರೂಕ್, ಅನ್ಸಾರ್ ಕೆ.ಎಂ, ಹಫೀಝ್ ಶಾಂತಿನಗರ್, ಜಿಯ ಎಚ್, ಸಂಚಾಲಕರಾಗಿ ಶಫೀರ್ (ಚಾಕಿ), ಉನೈಸ್ ಬಜಾಲ್, ಕಾರ್ಯಕಾರಣಿ ಸಮಿತಿ ಸದಸ್ಯರಾಗಿ ಮ.ನ.ಪಾ ಸದಸ್ಯರಾದ ಅಶ್ರಫ್ ಕೆ.ಇ, ಹನೀಫ್ ಎಚ್.ಎಸ್, ನಝೀರ್ ಬಜಾಲ್, ಅಮೀನ್, ಮುನೀರ್ ಎಚ್.ಎಸ್., ಇಮ್ರಾನ್ ಯು.ಪಿ., ಮನ್ಸೂರ್ ಪಾಂಡೆಲ್, ಸಿರಾಜ್, ದಾವೂದ್, ಸತ್ತಾರ್ ಕೊಡಂಗೆ, ನವಾಝ್ ಬಾಕಿಮಾರ್, ನಹೀಂ ಅವರನ್ನು ಆಯ್ಕೆ ಮಾಡಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article