.jpeg)
ಹೈಕಮಾಂಡ್ ಕೃಪೆಗಾಗಿ ಪೇಜಾವರ ಶ್ರೀಗಳ ವಿರುದ್ಧ ಕ್ಷುಲ್ಲಕ ಹೇಳಿಕೆ ನೀಡಿದ ಬಿ.ಕೆ. ಹರಿಪ್ರಸಾದ್ ವಿರುದ್ಧ ಜಿಲ್ಲಾ ಬಿಜೆಪಿ ಆಕ್ರೋಶ
Wednesday, October 30, 2024
ಮಂಗಳೂರು: ತಮ್ಮ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯ ಮನಸ್ಸು ಗೆಲ್ಲುವ ಉತ್ಸಾಹದಿಂದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಹಿಂದು ಸಮಾಜದ ಅತ್ಯಂತ ಸಂತರಾದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ವಿರುದ್ಧ ಮಾತನಾಡುತ್ತಾ ಹಿಂದು ಧರ್ಮದ ಮೇಲಿನ ತಮ್ಮ ಅಸಹನೆಯನ್ನು ತೆರೆದಿಟ್ಟಿದ್ದಾರೆ. ಪುಡಿರಾಜಕಾರಣಿ ಎನ್ನುವ ಹಗುರವಾದ ಶಬ್ದಗಳನ್ನು ಉಪಯೋಗಿಸಿ ಅಗೌರವ ತೋರಿಸಿ ನಿಂದನೆಯನ್ನು ಮಾಡಿರುವುದಕ್ಕೆ ದ.ಕ. ಬಿಜೆಪಿಯ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಪ್ರಕಟಣೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಸಂನ್ಯಾಸ ದೀಕ್ಷೆಯನ್ನು ಪಡೆದು ಸರ್ವ ಸಂಗ ಪರಿತ್ಯಾಗಿಯಾಗಿರುವ ಸದಾ ಸಮಾಜದ ಹಾಗೂ ರಾಷ್ಟ್ರದ ಹಿತ ಚಿಂತನೆಯನ್ನು ಮಾಡುತ್ತಾ ಸಮಾಜದಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಹಾಗೂ ನಾವೆಲ್ಲರೂ ಅತ್ಯಂತ ಗೌರವ ಆದರಗಳನ್ನು ಸಲ್ಲಿಸುವ ಪೂಜ್ಯರ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿದ ಬಿ.ಕೆ. ಹರಿಪ್ರಸಾದ್ ಅವರ ಮೇಲೆ ಕಾಂಗ್ರೆಸ್ ಪಕ್ಷ ಶೀಘ್ರದಲ್ಲಿ ಕ್ರಮವನ್ನು ಕೈಗೊಳ್ಳಬೇಕು ಮತ್ತು ಬಿ.ಕೆ. ಹರಿಪ್ರಸಾದ್ ಅವರು ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂದು ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.