
ಎಸ್ಜೆಇಸಿ ಮಹಿಳಾ ವಾಲಿಬಾಲ್ ತಂಡಕ್ಕೆ ರನ್ನರ್ಸ್ ಅಪ್ ಟ್ರೋಫಿ
Thursday, October 31, 2024
ಮಂಗಳೂರು: ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು (ಎಸ್ಜೆಇಸಿ) ಮಹಿಳಾ ವಾಲಿಬಾಲ್ ತಂಡವು ಅ.30 ರಂದು ಮಂಗಳೂರಿನ ಎಜೆಐಇಟಿಯಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಮಂಗಳೂರು ವಿಭಾಗದ ಮಹಿಳಾ ವಾಲಿಬಾಲ್ ಪಂದ್ಯಾವಳಿಯಲ್ಲಿ ಪಿಇಡಿ, ವನೀಶಾ ವಿ ರೋಡ್ರಿಗಸ್ ಮತ್ತು ಸಹಾಯಕ ಪಿಇಡಿ ಸುಧೀರ್ ಎಂ ಅವರ ಮಾರ್ಗದರ್ಶನದಲ್ಲಿ ರನ್ನರ್ಸ್ ಅಪ್ ಟ್ರೋಫಿಯನ್ನು ಪಡೆದುಕೊಂಡಿದ್ದಾರೆ.
ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ವಿಭಾಗದ ಮೂರನೇ ವರ್ಷದ ಬಿಇ ವಿದ್ಯಾರ್ಥಿ, ರೇಣಿಕಾ ಯತೀಶ್ ಅವರಿಗೆ ‘ಪಂದ್ಯಾವಳಿಯ ಬೆಸ್ಟ್ ಅಟ್ಯಾಕರ್’ ಪ್ರಶಸ್ತಿಯನ್ನು ನೀಡಲಾಯಿತು. ವಿಶ್ವವಿದ್ಯಾನಿಲಯ ಮಟ್ಟದ ಪಂದ್ಯಾವಳಿಯಲ್ಲಿ ಈ ಅಗಾಧ ಸಾಧನೆಗಾಗಿ ಎಸ್.ಜೆ.ಇ.ಸಿ ಆಡಳಿತ ಮಂಡಳಿ, ವಿದ್ಯಾರ್ಥಿಗಳು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರನ್ನು ಅಭಿನಂದಿಸಿದ್ದಾರೆ.