
ಉತ್ತಮ ಆಡಳಿತಗಾರ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆ
ಮಂಗಳೂರು: ಮಾನ್ಯತೆ ಪಡೆದ ಅನುದಾನ ರಹಿತ ಶಾಲೆಗಳ ಸಂಘ(ರುಪ್ಪಾ)ದಿಂದ 2024-25ನೇ ವರ್ಷದ ರಾಜ್ಯ ಮಟ್ಟದ ಉತ್ತಮ ಆಡಳಿತಗಾರ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಘೋಷಿಸಿದೆ.
ಉತ್ತಮ ಆಡಳಿತ ಮಂಡಳಿ ಪ್ರಶಸ್ತಿ:
ಮಂಗಳೂರು ಶಕ್ತಿನಗರದ ಶಕ್ತಿ ರೆಸಿಡೆನ್ಸಿಯಲ್ ಸ್ಕೂಲ್‌ನ ಅಧ್ಯಕ್ಷ ಡಾ. ಕೆ.ಸಿ. ನ್ಯಾಕ್ ಮಂಗಳೂರು, ಪುತ್ತೂರಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ, ಸವಣೂರು ವಿದ್ಯಾರಶ್ಮಿ ಸಮೂಹ ವಿದ್ಯಾ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ, ಬಂಟ್ವಾಳ ತಾಲೂಕಿನ ವಿಶಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಂಚಾಲಕರಾಗಿದ್ದ ದಿ.ಎಲ್.ಎನ್. ಕುಡೂರುರವರು ಉತ್ತಮ ಆಡಳಿತಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಂಗಳೂರು ಕಣಚೂರ್ ಪಬ್ಲಿಕ್ ಸ್ಕೂಲ್‌ನ ಚೇರ್‌ಮ್ಯಾನ್ ಯು.ಕೆ. ಮೋನು ಅವರೂ ಉತ್ತಮ ಆಡಳಿತಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸರಿತಾ ಜನಾರ್ದನ ಆಲಂಕಾರು, ವಿದ್ಯಾರತ್ನ ಎಚ್., ಎಲ್.ಎನ್. ಕುಡೂರು
ಉತ್ತಮ ಶಿಕ್ಷಕ ಪ್ರಶಸ್ತಿ:
ಪುತ್ತೂರಿನ ಮಂಜಲ್ಪಡ್ಡು ಸುದಾನ ವಸತಿಯುತ ಶಾಲೆಯ ಶಿಕ್ಷಕಿ ಕವಿತಾ ಅಡೂರು, ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ, ಕಡಬ ತಾಲೂಕಿನ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಸರಿತಾಜನಾರ್ದನ ಆಲಂಕಾರು, ಕಡಬ ತಾಲೂಕು ಸುಬ್ರಹ್ಮಣ್ಯ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕಿ ವಿದ್ಯಾರತ್ನ ಎಚ್. ಹಾಗೂ ಬಂಟ್ವಾಳ ತಾಲೂಕು ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕಿ ಸುಪ್ರಿಯಾ ಡಿ.ಅವರು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ನಾಳೆ ಪ್ರಶಸ್ತಿ ಪ್ರದಾನ:
ಅ.21 ರಂದು ಬೆಂಗಳೂರಿನ ಜುದ್ದಿ ಅಂತರರಾಷ್ಟ್ರೀಯ ಶಾಲಾ ಆಡಿಟೋರಿಯಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.