ನ.3 ರಂದು ಜವನೆರ್ ಬೆದ್ರ ಫೌಂಡೇಶನ್‌ನಿಂದ ಏಳನೇ ವರ್ಷದ ದೀಪಾವಳಿ ಸಂಭ್ರಮ: ಗೂಡುದೀಪ, ರಂಗೋಲಿ ಸ್ಪರ್ಧೆ, ಯೋಧರಿಗೆ ನಮನ

ನ.3 ರಂದು ಜವನೆರ್ ಬೆದ್ರ ಫೌಂಡೇಶನ್‌ನಿಂದ ಏಳನೇ ವರ್ಷದ ದೀಪಾವಳಿ ಸಂಭ್ರಮ: ಗೂಡುದೀಪ, ರಂಗೋಲಿ ಸ್ಪರ್ಧೆ, ಯೋಧರಿಗೆ ನಮನ

ಮೂಡುಬಿದಿರೆ: ಜವನೆರ್ ಬೆದ್ರ ಫೌಂಡೇಶನ್ (ರಿ.) ಅರ್ಪಿಸುವ ಏಳನೇ ವರ್ಷದ ದೀಪಾವಳಿ ಸಂಭ್ರಮದಂಗವಾಗಿ ನ.3 ರಂದು ಸಂಜೆ ಗೂಡುದೀಪ ಮತ್ತು ರಂಗೋಲಿ  ಸ್ಪರ್ಧೆ ಹಾಗೂ ಯೋಧರಿಗೆ ನಮನ ಕಾರ್ಯಕ್ರಮ ನಡೆಯಲಿದೆ ಎಂದು ಜವನೆರ್ ಬೆದ್ರ ಸಂಘಟನೆಯ ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮೂಡುಬಿದಿರೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯುವ ದೀಪಾವಳಿ ಸಂಭ್ರಮದ ಪ್ರಯುಕ್ತ ಸಂಜೆ ೪ ಗಂಟೆಯಿಂದ ವಿವಿಧ ಸ್ಪರ್ಧೆಗಳು ಆರಂಭಗೊಳ್ಳಲಿದ್ದು 5 ಗಂಟೆಯೊಳಗಡೆ ನಿಗದಿ ಪಡಿಸಿದ ಜಾಗದಲ್ಲಿ ಗೂಡುದೀಪಗಳನ್ನು ಅಳವಡಿಸಬೇಕು. ಇದೇ ವೇಳೆ ರಂಗೋಲಿ ಸ್ಪರ್ಧೆಯೂ ನಡೆಯಲಿದ್ದು ನಂತರ ಯೋಧ ನಮನ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ. ನ.೧ರೊಳಗೆ ಸ್ಪರ್ಧೆಗೆ ಹೆಸರು ನೋಂದಾಯಿಸಬೇಕೆಂದು ಜವನೆರ್ ಬೆದ್ರ ಫೌಂಡೇಶನ್‌ನ ಅಧ್ಯಕ್ಷ ಅಮರ್ ಕೋಟೆ ತಿಳಿಸಿದ್ದಾರೆ.

ನಂತರ ಭರತನಾಟ್ಯ ವಿದುಷಿ ಹಾಗೂ ಸಂಗೀತ ಕಲಾವಿದರು, ಆದಿ ಕಲ್ಚರಲ್ ಅಕಾಡೆಮಿ ಮತ್ತು ಅವರ ಬಳಗದ ಸ್ಥಾಪಕರು ಸುಮನಾ ಪ್ರಸಾದ್ ಬಳಗದಿಂದ ಭಕ್ತಿಗಾನ ಸಿಂಚನ ದೇವರ ನಾಮ ಸಂಕೀರ್ತನೆ ನಡೆಯಲಿದೆ ಎಂದು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article