ಅರಣ್ಯಾಧಿಕಾರಿಯಿಂದ ಬಿಲ್ಲವ ಹೆಣ್ಣು ಮಕ್ಕಳ ಬಗ್ಗೆ ಮಾನ ಹಾನಿಕಾರಕ ಆಡಿಯೋ: ಕ್ರಮಕೈಗೊಳ್ಳಲು ಹಿಂ.ಜಾ.ವೇ.ಯಿಂದ ಪೊಲೀಸರಿಗೆ ದೂರು

ಅರಣ್ಯಾಧಿಕಾರಿಯಿಂದ ಬಿಲ್ಲವ ಹೆಣ್ಣು ಮಕ್ಕಳ ಬಗ್ಗೆ ಮಾನ ಹಾನಿಕಾರಕ ಆಡಿಯೋ: ಕ್ರಮಕೈಗೊಳ್ಳಲು ಹಿಂ.ಜಾ.ವೇ.ಯಿಂದ ಪೊಲೀಸರಿಗೆ ದೂರು


ಮೂಡುಬಿದಿರೆ: ಬಿಲ್ಲವ ಜಾತಿಯ ಹೆಣ್ಣು ಮಕ್ಕಳ ಬಗ್ಗೆ ಮತ್ತು ಹಿಂದು ಯುವಕರ ಬಗ್ಗೆ ಆಶ್ಲೀಲ, ಮಾನಹಾನಿ ಮಾಡುವ ಮತ್ತು ಸಮಾಜದಲ್ಲಿ ವರ್ಗ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟು ಸಮಾಜದ ಶಾಂತಿಗೆ ಧಕ್ಕೆ ಉಂಟಾಗುವ ರೀತಿಯಲ್ಲಿ ಮಾತನಾಡಿರುವ  ಪುತ್ತೂರು ಉಪ ವಲಯ ಅರಣ್ಯಾಧಿಕಾರಿ ಸಂಜೀವ ಕಾಣಿಯೂರು ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಮೂಡುಬಿದಿರೆ ಹಿಂದೂ ಜಾಗರಣ ವೇದಿಕೆಯು ಗುರುವಾರ ಪೊಲೀಸರಿಗೆ ದೂರು ನೀಡಿದೆ.

ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಯೋಜಕ್ ಸಮಿತ್ ದರಗುಡ್ಡೆ ಈ ಬಗ್ಗೆ ಮಾಧ್ಯಮಕ್ಕೆ ಜತೆ ಮಾತನಾಡಿ ಸರಕಾರಿ ನೌಕರನಾಗಿರುವ ಅರಣ್ಯಾಧಿಕಾರಿ ಸಂಜೀವ ಕಾಣಿಯೂರು ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲವಾಗಿ ಮಾನಕ್ಕೆ ಧಕ್ಕೆ ಆಗುವ ರೀತಿಯಲ್ಲಿ ಮತ್ತು ಇಡೀ ಬಿಲ್ಲವ ಹೆಣ್ಣು ಮಕ್ಕಳ ಚಾರಿತ್ರ್ಯವಧೆ ಮಾಡುವ ರೀತಿಯಲ್ಲಿ ಅಶ್ಲೀಲವಾಗಿ ಮಾತನಾಡುವ ಆಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದ್ದು, ಹಿಂದು ಯುವಕರು ಭಜನೆಯ ನೆಪದಲ್ಲಿ ಹಿಂದು ಹೆಣ್ಣು ಮಕ್ಕಳನ್ನು ಅನೈತಿಕತೆಗೆ ಬಳಸುತ್ತಿದ್ದಾರೆ ಎಂದು ಕೆಟ್ಟದಾಗಿ ಆಧಾರ ರಹಿತವಾಗಿ ಮಾತನಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಅಶಾಂತಿಯನ್ನು ಉಂಟು ಮಾಡುವ ಮತ್ತು ಸಮಾಜದಲ್ಲಿ ವರ್ಗ ಸಂಘರ್ಷ ಮತ್ತು ಜಾತಿ ಸಂಘರ್ಷ ಉಂಟು ಮಾಡಿ ಸಮಾಜದ ಶಾಂತಿಗೆ ಧಕ್ಕೆ ಉಂಟು ಮಾಡುವ ದುರುದ್ದೇಶದಿಂದ ಈ ರೀತಿ ಬಿಲ್ಲವ ಜಾತಿಯ ಹೆಣ್ಣು ಮಕ್ಕಳ ಬಗ್ಗೆ ಮತ್ತು ಹಿಂದೂ ಯುವಕರ ಬಗ್ಗೆ ಅಶ್ಲೀಲ ಶಬ್ದದಲ್ಲಿ ನಿಂದಿಸಿ ಸಮಾಜದ ಶಾಂತಿಗೆಧಕ್ಕೆ ಉಂಟು ಮಾಡಿರುವ ಸರಕಾರಿ ನೌಕರಿ ಹೊಂದಿರುವ ಈ ವ್ಯಕ್ತಿಯನ್ನು ನೌಕರಿಯಿಂದ ವಜಾಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮೂಡುಬಿದಿರೆ ಪೊಲೀಸ್ ಅಧಿಕಾರಿ ಸಂದೇಶ್ ಪಿ.ಜಿ. ಅವರ ಮೂಲಕ ಮೇಲಾಧಿಕಾರಿಗಳಿಗೆ ದೂರು ನೀಡಲಾಯಿತು.

ಜಿಲ್ಲಾ ಪ್ರಮುಖರಾದ ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ, ಸಂದೀಪ್ ಹೆಗ್ಡೆ, ಹಾಗೂ ತಾಲುಕು ಸಹ ಸಂಯೋಜಕರಾದ ಶರತ್ ಮಿಜಾರ್, ತಾಲೂಕು ಪ್ರಮುಖರಾದ ಅನುಜ್ ಭಂಡಾರಿ, ಯತೀಶ್ ಮಿಜಾರ್, ಶಿವರಾಜ್ ಆಚಾರ್ಯ, ಪ್ರದೀಪ್ ಕೋಟ್ಯಾನ್, ಪ್ರವೀಣ್ ಮಿಜಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article