
ಪಡಿತರ: ಸರ್ವರ್ ಸಮಸ್ಯೆ ಸರಿ ಪಡಿಸುವಂತೆ ಭರತ್ ಶೆಟ್ಟಿ ಸೂಚನೆ
Sunday, October 20, 2024
ಸುರತ್ಕಲ್: ಸರ್ವರ್ ಸಮಸ್ಯೆಯಿಂದ ಪಡಿತರ ಸಿಗುವಲ್ಲಿ ವಿಳಂಬವಾಗುತ್ತಿದ್ದು, ಜನತೆ ಪರದಾಡುವಂತಾಗಿದೆ. ಅಧಿಕಾರಿಗಳು ಈ ಬಗ್ಗೆ ಗಮನ ನೀಡಬೇಕು ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಸೂಚಿಸಿದ್ದಾರೆ.
ನಿತ್ಯ ಕೆಲಸ ಕಾರ್ಯ ಬಿಟ್ಟು ರೇಷನ್ ಅಂಗಡಿ ಮುಂದೆ ಜನ ನಿಲ್ಲುವಂತಾಗಿದೆ. ದೀಪಾವಳಿ ಹಬ್ಬವೂ ಇದ್ದು ಜನತೆಗೆ ಸಿಗುವ ಪಡಿತರವನ್ನು ಸೂಕ್ತ ಸಮಯದಲ್ಲಿ ಸಿಗುವಂತೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದ್ದಾರೆ.