
ಹೆತ್ತವರನ್ನು ಕಡೆಗಣಿಸಬೇಡಿ: ಈಶ್ವರ ಮಲ್ಪೆ
Monday, November 25, 2024
ಕಟೀಲು: ನಾಲ್ಕು ಗೋಡೆಯ ಮಧ್ಯೆ ಮಕ್ಕಳನ್ನು ಬೆಳೆಸಬೇಡಿ. ಸಾಧನೆಗಳಿಗೆ ಪ್ರೇರೇಪಿಸಿ. ಮಕ್ಕಳ ಸಾಧನೆ ತಂದೆ ತಾಯಿಗೆ ಶಾಲೆಗೆ ಹೆಸರು ತಂದು ಕೊಡುತ್ತದೆ. ಸಮಾಜ ಸೇವೆಗೆ ಮಕ್ಕಳನ್ನು ಪ್ರೇರೇಪಿಸಬೇಕು ಎಂದು ಜೀವರಕ್ಷಕ ಈಶ್ವರ ಮಲ್ಪೆ ಹೇಳಿದರು.
ಅವರು ಕಟೀಲು ನುಡಿಹಬ್ಬದ ಗೋಷ್ಟಿಯಲ್ಲಿ ಮಾತನಾಡಿದರು.
ತನ್ನ ಮಕ್ಕಳು ವಿಕಲಾಂಗರು. ಮನೆಯಲ್ಲಿ ಕಷ್ಟ ಇದೆ. ಆದರೆ ತಿಳಿದಿರುವ ಈಜಿನ ವಿದ್ಯೆಯಿಂದ ನೂರಾರು ಮಂದಿಯ ಜೀವ ಉಳಿಸಿದ ಸಂತೃಪ್ತಿ ಇದೆ. ಇನ್ನೊಬ್ಬನಿಗೆ ಸಹಾಯ ಮಾಡುವುದು ದೇವರ ಕೆಲಸ ಎಂದು ಈಶ್ವರ ಮಲ್ಪೆ ಹೇಳಿದರು.
ಎಷ್ಟು ಸಾಧನೆ ಹಣ ಸಂಪಾದನೆ ಮಾಡಿದರೂ ತಂದೆತಾಯಿಯನ್ನು ಮರೆಯಬಾರದು. ನಾನು ಕೆಲವರನ್ನು ಅನಾಥಾಶ್ರಮಕ್ಕೆ ಬಿಟ್ಟಿದ್ದೇನೆ. ಎಂತಹ ಸಂದರ್ಭ ಬಂದರೂ ಹೆತ್ತವರನ್ನು ಕಡೆಗಣಿಸಬೇಡಿ ಎಂದು ಅವರು ಹೇಳಿದರು.
ಕಟೀಲು ಶಿಕ್ಷಣ ಸಂಸ್ಥೆಗಳ ಹಿರಿಯ ವಿದ್ಯಾರ್ಥಿಗಳಾದ ಡಾ. ವೇಣುಗೋಪಾಲ್, ಶಕುಂತಲಾ ನಿರೇಂದ್ರ, ಡಾ. ಶ್ರದ್ಧಾ ಕೆದಿಲಾಯ ಉಪಸ್ಥಿತರಿದ್ದರು.