ಬಿಜೆಪಿಗರು ‘ಪಾಕಿಸ್ತಾನ’ ಎಂಬ ಪದ ಬಳಸಿದಷ್ಟು ಕರ್ನಾಟಕ ಎಂದು ಬಳಸಿರಲಿಕ್ಕಿಲ್ಲ: ಕೆ. ಅಶ್ರಫ್

ಬಿಜೆಪಿಗರು ‘ಪಾಕಿಸ್ತಾನ’ ಎಂಬ ಪದ ಬಳಸಿದಷ್ಟು ಕರ್ನಾಟಕ ಎಂದು ಬಳಸಿರಲಿಕ್ಕಿಲ್ಲ: ಕೆ. ಅಶ್ರಫ್

ಮಂಗಳೂರು: ರಾಜ್ಯದಲ್ಲಿ ಅದೆಷ್ಟೋ ಪ್ರಸ್ತಾವನೆ ಅರ್ಹ ವಿಷಯವಿದ್ದರೂ, ರಾಜ್ಯದ ಜನತೆಗೆ ಭಾವನಾತ್ಮಕ ವಿಷಯವನ್ನು ಬಲವಂತವಾಗಿ ಹೇರಲು ಪ್ರಯತ್ನಿಸುವ ಬಿಜೆಪಿಗರು ತಮ್ಮ ಜೀವಿತಾವಧಿಯಲ್ಲಿ ‘ಪಾಕಿಸ್ತಾನ’ ಎಂಬ ಪದ ಬಳಸಿದಷ್ಟು ಬಾರಿ ನಮ್ಮ ನಾಡು ಕರ್ನಾಟಕ ಎಂದು ಬಳಸಿರಲಿಕ್ಕಿಲ್ಲ ಎಂದು ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರ್. ಅಶೋಕ್, ಯತ್ನಾಳ್, ಸಿ.ಟಿ. ರವಿ, ಪ್ರಹ್ಲಾದ್ ಜೋಷಿ, ಬಿ.ಎಲ್. ಸಂತೋಷ್, ಚಕ್ರವರ್ತಿ ಸೂಲಿಬೆಲೆ, ಪ್ರತಾಪ್ ಸಿಂಹ, ಡಾ. ಭರತ್ ಶೆಟ್ಟಿ ಅವರ ಹೆಸರನ್ನು ಅವರು ‘ಪಾಕಿಸ್ತಾನ’ ಎಂಬ ಪದದ ಅಪರಿಮಿತ ಸಂಭೋಧಕ್ಕಾಗಿ ಅವರಿಗೆ ಪ್ರಶಸ್ತಿ ನೀಡಬೇಕೆಂದು ಸರಕಾರ ಪಾಕಿಸ್ತಾನ ರಾಯಭಾರಿ ಕಚೇರಿಗೆ ಶಿಫಾರಸು ಮಾಡುವುದು ಸೂಕ್ತ ಎನಿಸಬಹುದು. 

ಪಾಕಿಸ್ತಾನವು ಒಂದು ವೇಳೆ ತನ್ನ ದೇಶದ ಹೆಸರನ್ನು ಮೇಲ್ದರ್ಜೆಗೆ ಏರಿಸುವ ಸಂದರ್ಭ ಬಂದರೆ ಕರ್ನಾಟಕ ಬಿಜೆಪಿಗರಲ್ಲಿ ವಿಚಾರಿಸುವಂತಹ ಅನಿವಾರ್ಯ ಸ್ಥಿತಿ  ಬರದೇ ಇರಲಿ. ಪಾಕಿಸ್ತಾನ ತನ್ನ ಹೆಸರನ್ನು ಬದಲಾಯಿಸುವ ನಿರ್ಧಾರ ಕೈಗೊಂಡರೆ ಬಿಜೆಪಿಗರು ಕೆಲವೊಮ್ಮೆ ನೆಗೆದು ಬೀಳುವುದರಲ್ಲಿ ಅನುಮಾನ ಇಲ್ಲ!, ರಾಜ್ಯದಲ್ಲಿ ಅದೆಷ್ಟೋ ವಿಷಯಗಳು ಪ್ರಸ್ತಾವನೆ ಯೋಗ್ಯ ಇರುವಾಗ,ಮತೀಯ ವಿದ್ವೇಷ ಸೃಷ್ಟಿಸುವ ಕಾರಣಕ್ಕಾಗಿಯೇ ಪಾಕಿಸ್ತಾನ ಪದವನ್ನು ಎಳೆದು ತರುವ ಬಿಜೆಪಿಗರು ಮುಂದೊಂದು ದಿನ ಪಾಕ್ಮೇನಿಯದಿಂದ ಬಳಲುವ ಕಾಲ ದೂರವಿಲ್ಲ. ಹಾವೇರಿಯಲ್ಲಿ ಅನಗತ್ಯ ವಕ್ಫ್ ವಿಷಯದ ಬಗ್ಗೆ ವಿವಾದ ಸೃಷ್ಟಿಸಿ ಪರಿಸ್ಥಿತಿ ವಿಕೋಪಕ್ಕೆ ತಲುಪುವಷ್ಟು ಸಾಧನೆ ಮಾಡಿದ ಬಿಜೆಪಿಗರು ರಾಜ್ಯದಲ್ಲಿ ಸಾಮೂಹಿಕ ಉದ್ವಿಗ್ನತೆ ಸೃಷ್ಟಿಸುವ ಹುನ್ನಾರ ಕೈಗೊಂಡಂತಿದೆ ಎಂದು ಕೆ. ಅಶ್ರಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article