
ಎಸ್.ಡಿ.ಎಂ ಅಂತರ್ ಕಾಲೇಜು ಗೂಡುದೀಪ ಸ್ಪರ್ಧೆ
Tuesday, November 5, 2024
ಉಜಿರೆ: ಎಸ್.ಡಿ.ಎಂ ಪದವಿ ಶಿಕ್ಷಣ ಸಂಸ್ಥೆಗಳ ಅಂತರ್ ಕಾಲೇಜು ಗೂಡುದೀಪ ರಚನಾ ಸ್ಪರ್ಧೆ ಅ.29 ರಂದು ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜು ಉಜಿರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಯಲ್ಲಿ 30 ತಂಡಗಳು ಭಾಗವಹಿಸಿದವು. ಪರಿಸರ ಸ್ನೇಹಿ ವಸ್ತುಗಳಿಂದ ಗೂಡು ದೀಪ ರಚಿಸಲು ಪ್ರಾಮುಖ್ಯತೆ ನೀಡಲಾಯಿತು.
ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನ ಅನು ಪ್ರಕಾಶ್ ಮತ್ತು ಜೀವನ್ ಪ್ರಥಮ ಸ್ಥಾನ, ಎಸ್‌ಡಿಎಂ ನ್ಯಾಚುರೋಪತಿ ಕಾಲೇಜಿನ ಸಂಸ್ಕೃತಿ ಜೈನ್ ಮತ್ತು ಆಕ್ಷಯ್ ದ್ವಿತೀಯ ಹಾಗೂ ಇಂಜಿನಿಯರಿಂಗ್ ಕಾಲೇಜಿನ ಶ್ರೀನವ್ಯ ಮತ್ತು ಸಿಂಚನ ತೃತೀಯ ಸ್ಥಾನವನ್ನು ಗಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ವಿಜೇತರಿಗೆ ನಗದು ಬಹುಮಾನ ವಿತರಿಸಿದರು. ತೀರ್ಪುಗಾರರಾಗಿ ಡಾ. ರವೀಶ್ ಪಡುಮಲೆ ಹಾಗೂ ಡಾ. ಶೋಭ ಜೀವಂಧರ್ ಸಹಕರಿಸಿದರು. ಸಹಪ್ರಾಧ್ಯಾಪಕ ಡಾ. ಕೃಷ್ಣಪ್ರಸಾದ್ ಕಾರ್ಯಕ್ರಮ ಸಂಯೋಜಿಸಿದರು.