.jpeg)
ಡ್ರಗ್ಸ್ ಪತ್ತೆಯಾದರೆ ಪೊಲೀಸರೇ ಹೊಣೆ: ಡಾ. ಜಿ. ಪರಮೇಶ್ವರ್
Saturday, November 30, 2024
ಮಂಗಳೂರು: ಡ್ರಗ್ಸ್ ದಂಧೆಯನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸರ್ಕಾರ ಪಣ ತೊಟ್ಟಿದೆ. ಅದಕ್ಕಾಗಿ ಪೊಲೀಸರು ಶಕ್ತಿಮೀರಿ ಶ್ರಮಿಸಬೇಕು. ಇದರ ಹೊರತೂ ಡ್ರಗ್ಸ್ ದಂಧೆ ಪತ್ತೆಯಾದರೆ ಅದಕ್ಕೆ ಪೊಲೀಸರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಚಿವ ಡಾ. ಜಿ. ಪರಮೇಶ್ವರ್ ಎಚ್ಚರಿಕೆ ನೀಡಿದರು.
ಡ್ರಗ್ಸ್ ಪೆಡ್ಲರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ನಮ್ಮದೇ ಮಕ್ಕಳು ದಂಧೆಗೆ ಸಿಲುಕು ಹಾಳಾಗುತ್ತಾರೆ. ಹಾಗಾಗಿ ಇನ್ನು ಮುಂದೆ ಶಾಲಾ ಕಾಲೇಜುಗಳಿಗೆ ಪೊಲೀಸರೇ ಭೇಟಿ ನೀಡಿ ಡ್ರಗ್ಸ್ ಸೇರಿದಂತೆ ಮಾದಕದ್ರವ್ಯಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಪ್ರತಿ ತಿಂಗಳು ಪೊಲೀಸರು ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಡ್ರಗ್ಸ್ ಸೇವನೆ ವಿರುದ್ಧ ಮನವರಿಕೆ ಮಾಡಬೇಕು ಎಂದರು.
ಹಿಂದೆ ಗಾಂಜಾ ಬೆಳೆಯುತ್ತಿದ್ದರು, ಈಗ ಸಿಂಥೆಟಿಕ್ಸ್ ಆಗಿ ಡ್ರಗ್ಸ್ ಜಾಲ ಹಬ್ಬುತ್ತಿದೆ. ಡ್ರಗ್ಸ್ ಸೇವನೆಯಿಂದ ಯುವ ಜನತೆ ಹಾಳಾಗುತ್ತಿದ್ದು, ನ್ಯೂರೋ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಎಲ್ಲರ ಮಕ್ಕಳೂ ನಮ್ಮ ಮಕ್ಕಳೇ ಎಂದು ತಿಳಿದುಕೊಂಡು ಪೊಲೀಸರು ಡ್ರಗ್ಸ್ ವಿರುದ್ಧ ಭಾರಿ ಸಮರವನ್ನೇ ಸಾರಬೇಕು ಎಂದು ಸಚಿವರು ಹೇಳಿದರು.