.jpeg)
ನಕ್ಸಲರು ಶರಣಾದರೆ ಒಳ್ಳೇದು: ಡಾ. ಜಿ. ಪರಮೇಶ್ವರ್
Saturday, November 30, 2024
ಮಂಗಳೂರು: ವಿಕ್ರಂ ಗೌಡನ ಹತ್ಯೆ ಬಳಿಕ ನಕ್ಸಲರ ಹಾದಿ ಕಠಿಣವಾಗಿದೆ. ಆತನ ಸಹಚರರಿಗೆ ಸಮಾಜದ ಮುಖ್ಯವಾಹಿನಿಗೆ ಬರಲು ಶರಣಾಗುವಂತೆ ನಕ್ಸಲರಿಗೆ ಅವಕಾಶ ನೀಡಲಾಗಿದೆ. ಇದನ್ನು ಒಪ್ಪಗೆ ನಕ್ಸಲ್ ಆಗಿ ಮುಂದುವರಿಯುವುದು ಬೇಡ. ಶರಣಾಗುವ ನಕ್ಸಲರಿಗೆ ಸರ್ಕಾರದಿಂದಲೇ ಜೀವನಕ್ಕೆ ಪ್ಯಾಕೇಜ್ ಘೋಷಣೆ ಮಾಡಿದ್ದು, ಶರಣಾಗುವಂತೆ ನಕ್ಸಲರಿಗೆ ಅರಣ್ಯಗಳಲ್ಲಿ ಕೂಂಬಿಂಗ್ ನಿರತ ಪೊಲೀಸ್ ಪಡೆ ಆಹ್ವಾನ ನೀಡಿದೆ. ಹಾಗಾಗಿ ಶರಣಾದರೆ ನಕ್ಸಲರಿಗೆ ಒಳ್ಳೆಯದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಕಾನೂನು ರೀತಿಯ ಕ್ರಮ:
ಮುಸ್ಲಿಂ ವೋಟ್ ಬ್ಯಾನ್ ಹೇಳಿಕೆ ನೀಡಿದ ಚಂದ್ರಶೇಖರನಾಥ್ ಸ್ವಾಮೀಜಿ ವಿರುದ್ಧ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಡಾ.ಪರಮೇಶ್ವರ್ ಪ್ರತಿಕ್ರಿಯಿಸಿದರು.
ಕಾನೂನಿನ ಎದುರು ನಾನು ಸೇರಿದಂತೆ ಎಲ್ಲರೂ ಸಮಾನರು. ಚಂದ್ರಶೇಖರನಾಥ್ ಸ್ವಾಮೀಜಿ ಕೂಡ ಕಾನೂನು ಎದುರು ದೊಡ್ಡವರಲ್ಲ. ಕಾನೂನು ಬೇರೆ ಬೇರೆ ಇದ್ದರೆ ಉಪಯೋಗಿಸಬಹುದು. ಈ ದೇಶದಲ್ಲಿರುವ ಕಾನೂನು ಎಲ್ಲರಿಗೂ ಒಂದೇ. ಕಾನೂನು ಚೌಕಟ್ಟಿನಲ್ಲಿ ಏನು ಮಾಡಬೇಕೋ ಅದನ್ನೇ ಪೊಲೀಸ್ ಇಲಾಖೆ ಮಾಡುತ್ತದೆ. ಅವರ ಬಂಧನ ಪ್ರಕ್ರಿಯೆ ಬಗ್ಗೆ ಪೊಲೀಸರು ನೋಡಿಕೊಳ್ಳುತ್ತಾರೆ ಎಂದರು.