ಪಕ್ಕಲಡ್ಕದಲ್ಕಿ ಬಣ್ಣ ಬಣ್ಣದ ಕಡ್ಡಿಗಳನ್ನು ಹಚ್ಚಿ ಸೌಹಾರ್ದ ದೀಪಾವಳಿ ಆಚರಣೆ

ಪಕ್ಕಲಡ್ಕದಲ್ಕಿ ಬಣ್ಣ ಬಣ್ಣದ ಕಡ್ಡಿಗಳನ್ನು ಹಚ್ಚಿ ಸೌಹಾರ್ದ ದೀಪಾವಳಿ ಆಚರಣೆ


ಮಂಗಳೂರು: ಪ್ರತೀ ವರ್ಷ ಊರಿನ ಎಲ್ಲಾ ಸಮುದಾಯದ ಜನರನ್ನು ಜಾತಿ, ಮತ, ಭೇದವಿಲ್ಲದೆ ಮತ್ತು ರಾಜಕೀಯರಹಿತವಾಗಿ ಸೌಹಾರ್ದ ದೀಪಾವಳಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಊರಿನ ಸೌಹಾರ್ದತೆಯನ್ನು ಎತ್ತಿ ಹಿಡಿಯಲು ಸದಾ ಪ್ರಯತ್ನಿಸುತ್ತಿರುವ ಡಿವೈಎಫ್‌ಐ ಮತ್ತು ಪಕ್ಕಲಡ್ಕ ಯುವಕ ಮಂಡಲದ ಈ ನಡೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಕಾವುಬೈಲ್ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕೇಸ್ತರ ರಾಮಚಂದ್ರ ಆಳ್ವ ಹೇಳಿದರು.

ಅವರು ಡಿವೈಎಫ್‌ಐ ಬಜಾಲ್ ಪಕ್ಕಲಡ್ಕ ಹಾಗೂ ಪಕ್ಕಲಡ್ಕ ಯುವಕ ಮಂಡಲ(ರಿ) ಇವರ ಸಂಯುಕ್ತ ಆಶ್ರಯದಲ್ಲಿ ನ.3 ರಂದು ಪಕ್ಕಲಡ್ಕದಲ್ಲಿ ನಡೆದ ಸೌಹಾರ್ದ ದೀಪಾವಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯ ನವೀನ್ ಲೋಬೋ ಮಾತನಾಡಿ, ಪಕ್ಕಲಡ್ಕ ಯುವಕ ಮಂಡಲ ಮತ್ತು ಯುವಜನ ಸಂಘಟನೆ ಈ ಊರಿನ ಜನರಿಗಾಗಿ ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆಗಳು ನಿಜಕ್ಕೂ ಪ್ರಶಂಸನೀಯ. ಇಂತಹ ಸಂಸ್ಥೆಗಳು ಮತ್ತು ಸಂಘಟನೆಗಳು ಪ್ರದೇಶದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಕಾರಣ ಸೌಹಾರ್ದತೆ ಎಂಬುದನ್ನು ಇನ್ನೂ ಜೀವಂತವಾಗಿರಿಸಿದೆ. ಈ ನಿಟ್ಟಿನಲ್ಲಿ ಸೌಹಾರ್ದತೆಯಿಂದ ಆಚರಿಸುವ ಎಲ್ಲಾ ಹಬ್ಬಗಳೂ ಜನರಲ್ಲಿ ಆತಂಕಗಳನ್ನು ಕಡಿಮೆಗೊಳಿಸಿ ಖುಷಿಯನ್ನು ಹಿಮ್ಮಡಿಗೊಳಿಸಲು ಸಾಧ್ಯವಾಗಲಿದೆ ಎಂದರು.

ಕಾರ್ಯಕ್ರಮವನ್ನು ಉದ್ದೇಶೀಸಿ ಬಜಾಲ್ ನಂತೂರು ಬದ್ರಿಯಾ ಜುಮ್ಮಾ ಮಸೀದಿ ಕಾರ್ಯದರ್ಶಿ ಅಬ್ದುಲ್ ಹಮೀದ್, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಪ್ರವೀಣ್ ಚಂದ್ರ ಆಳ್ಚ, ಸತ್ಯನಾರಾಯಣ ಭಜನಾ ಮಂದಿರದ ಕಾರ್ಯದರ್ಶಿ ರಮೇಶ್ ಸಾಲ್ಯಾನ್ ಮಾತನಾಡಿದರು. 

ಡಿವೈಎಫ್‌ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದರು. ಡಿವೈಎಫ್‌ಐ ಪಕ್ಕಲಡ್ಕ ಘಟಕದ ಅಧ್ಯಕ್ಷ ದೀಕ್ಷಿತ್ ಭಂಡಾರಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸ್ಥಳೀಯರಾದ ರಮೇಶ್ ಸಾಲ್ಯಾನ್ ಸಂಗೀತ ಕ್ಷೇತ್ರ, ಡಾ. ಪ್ರಖ್ಯಾತ್ ರೈ ಶಿಕ್ಷಣ ಕ್ಷೇತ್ರ, ರಕ್ಷೀತ್ ಬಜಾಲ್, ಕಲಾ ಕ್ಷೇತ್ರ, ಹಸನ್ ಜೆ.ಎಮ್. ರೋಡ್ ಸಮಾಜಸೇವಾ ಕ್ಷೇತ್ರದಲ್ಲಿ ಮಹತ್ತರವಾದ ಕೊಡುಗೆ ನೀಡಲಾದ ಸಾಧಕರಿಗೆ ಸನ್ಮಾನಿಸಲಾಯಿತು. 

ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಖ್ಯಾತ ಸಂಗೀತಗಾರ ರಮೇಶ್ ಸಾಲ್ಯಾನ್ ಮತ್ತು ಬಳಗದವರಿಂದ ಸಂಗೀತ ಕಾರ್ಯಕ್ರಮವನ್ನು ಇದೇ ವೇದಿಕೆಯಲ್ಲಿ ನಡೆಯಿತು.

ಪಕ್ಕಲಡ್ಕ ಯುವಕ ಮಂಡಲದ ಕಾರ್ಯದರ್ಶಿ ಪ್ರೀತೇಶ್ ಬಜಾಲ್ ಸ್ವಾಗತಿಸಿದರು. ಡಿವೈಎಫ್‌ಐ ಮುಖಂಡ ಆನಂದ ಬಜಾಲ್ ವಂದಿಸಿ, ಜಗದೀಶ್ ಬಜಾಲ್ ಕಾರ್ಯಕ್ರಮವನ್ನು ನಿರೂಪಿಸಿದರು.







Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article