
ಬಿರುಗಾಳಿ, ಮಳೆ: ಕೋಟೆಬಾಗಿಲು, ಕಲ್ಲಬೆಟ್ಟುವಿನಲ್ಲಿ ಉರುಳಿದ ಮರ
Sunday, November 3, 2024
ಮೂಡುಬಿದಿರೆ: ತಾಲೂಕಿನಲ್ಲಿ ಭಾನುವಾರ ಸಂಜೆ ಬೀಸಿದ ಬಿರುಗಾಳಿ ಮಳೆಗೆ ಕೋಟೆಬಾಗಿಲು ಮತ್ತು ಕಲ್ಲಬೆಟ್ಟುವಿನಲ್ಲಿ ರಸ್ತೆಗೆ ಅಡ್ಡವಾಗಿ ಮರಗಳು ಉರುಳಿ ಬಿದ್ದ ಪರಿಣಾಮವಾಗಿ ವಾಹನ ಸಂಚಾರಕ್ಕೆ ತಡೆಯುಂಟಾದ ಘಟನೆ ನಡೆದಿದೆ.
ಕಲ್ಲಬೆಟ್ಟು ಎಕ್ಸಲೆಂಟ್ ಕಾಲೇಜು ಬಳಿಯ ರಾಜ್ಯ ಹೆದ್ದಾರಿ ಮತ್ತು ಕೋಟೆಬಾಗಿಲು ಮಸೀದಿ ಬಳಿ ಶಿರ್ತಾಡಿ ರಾಜ್ಯ ಹೆದ್ದಾರಿಗೆ ಮರ ಬಿದ್ದ ಪರಿಣಾಮ ಮರಿಯಾಡಿ ಬಳಿಯ ಒಳರಸ್ತೆಯ ಮೂಲಕ ವಾಹನ ಸಂಚಾರ ನಡೆಯಿತು.
ಕೋಟೆಬಾಗಿಲು ಪ್ರಗತಿ ರಸ್ತೆಯಲ್ಲೂ ಮರಬಿದ್ದಿದೆ. ಮುರಮೇಲುನಲ್ಲಿ ಟಿಸಿ ಮತ್ತು ಕೆಲವು ವಿದ್ಯುತ್ ಕಂಬಗಳೂ ಬಿದ್ದು ವಿದ್ಯುತ್ ಸಂಪರ್ಕ ತೊಡಕುವುಂಟಾಗಿ ಮೆಸ್ಕಾಂ ಬದಲಿ ವ್ಯವಸ್ಥೆ ಮಾಡಲಾಯಿತು.
ಅರಣ್ಯ ಇಲಾಖಾ ಸಿಬಂದಿಗಳು ಮೂರು ತಾಸು ಪರಿಶ್ರಮ ಪಟ್ಟು ಮರಗಳನ್ನು ತೆರವುಗೊಳಿಸಿ ವಾಹನ ಸಂಚಾರ ಪುನರಾರಂಭಕ್ಕೆ ಅವಕಾಶ ಮಾಡಿಕೊಟ್ಟರು.