
ರಾಮಕ್ಷತ್ರಿಯ ಮಹಿಳಾ ವೃಂದದಿಂದ ಕನ್ನಡ ರಾಜ್ಯೋತ್ಸವ
Sunday, November 3, 2024
ಮಂಗಳೂರು: ಮಂಗಳೂರಿನ ಮಾರ್ಗನ್ಸ್‌ಗೇಟ್‌ನ ರಾಮಕ್ಷತ್ರಿಯ ಮಹಿಳಾ ವೃಂದದ ಅಧ್ಯಕ್ಷೆ ಶುಭ ಪ್ರಶಾಂತ್ ನುಳ್ಳಿಪಾಡಿ ಅವರ ನೇತೃತ್ವದಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕನ್ನಡ ರಾಜ್ಯೋತ್ಸವದ ಕುರಿತು ಶಾರದ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಯಶೋಧ ಕುಮಾರಿ ಮಾತನಾಡಿ, 1973 ನವೆಂಬರ್ 1 ರಂದು ಕನಾ೯ಟಕ ರಾಜ್ಯ ಎಂದು ಮರುನಾಮಕರಣ ಆಯಿತು. ಇಂದಿಗೆ 51 ವಷ೯ ಪೂರೈಸಿ 52ನೇ ವಷ೯ಕ್ಕೆ ಕಾಲಿಟ್ಟಿದೆ. ಇಂತಹ ಸಂದರ್ಭದಲ್ಲಿ ಆಲೂರು ವೆಂಕಟರಾಯರನ್ನು ಸ್ಮರಿಸಿಕೊಳ್ಳಲೇ ಬೇಕು. ಕನ್ನಡ ನಾಡಿನ ಏಳಿಗೆಗೆ ದುಡಿದಂತಹ ಮಹನೀಯರು ಅನೇಕರು. ಅವರ ಶ್ರಮದ ಫಲದಿಂದಾಗಿ ನಾವೆಲ್ಲರೂ ಈ ದಿನದ ಸಂಭ್ರಮವನ್ನು ನಾಡಿನಾದ್ಯಂತ ಜಾತಿ ಧಮ೯ದ ಭೇದವಿಲ್ಲದೆ ಆಚರಿಸುತ್ತಿದ್ದೇವೆ. ಇಂದು ಕನ್ನಡದ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲ. ವಿದೇಶಿ ಸಂಸ್ಕೃತಿಗೆ ಮಾರು ಹೋಗಿ ತಮ್ಮತನವನ್ನು ಮರೆಯುತ್ತಿದ್ದಾರೆ. ಇನ್ನಾದರೂ ಹಿಂದಿನ ವೈಭವವನ್ನು ನಮ್ಮ ಯುವಜನತೆ ಮೆರೆಸುವಂತಾಗಲಿ. ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ನಾವೆಲ್ಲರೂ ಶ್ರಮಿಸೋಣ ಎಂದು ಹೇಳಿದರು.
ಕಾರ್ಯದರ್ಶಿ ನಯನ ಪ್ರವೀಣ್ ಪರಿಚಯ ಮಾಡಿದರು. ರಾಜೇಶ್ವರಿ ಅವರು ಕನ್ನಡ ರಾಜ್ಯೋತ್ಸವದ ಗೀತೆಯನ್ನ ಹಾಡಿದರು.