
ನಿಂತಿದ್ದ ಲಾರಿಗೆ ಟ್ಯೂರಿಸ್ಟ್ ಬಸ್ ಢಿಕ್ಕಿ ಹಲವರಿಗೆ ಗಾಯ
Sunday, November 3, 2024
ಶಿರ್ವ: ನಿಂತಿದ್ದ ಲಾರಿಗೆ ಟ್ಯೂರಿಸ್ಟ್ ಬಸ್ ಢಿಕ್ಕಿಯಾಗಿ ಬಸ್ ನಲ್ಲಿದ್ದ ಹಲವು ಮಂದಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಬಳಿ ಭಾನುವಾರ ನಡೆದಿದೆ.
ಟ್ಯೂರಿಸ್ಟ್ ಬಸ್ನಲ್ಲಿದ್ದ ಪ್ರವಾಸಿಗರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳುತ್ತಿದ್ದರು. ಗಾಯಾಳುಗಳು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಸ್ ನಜ್ಜುಗುಜ್ಜಾಗಿದೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.