
ಮಹಾರಾಷ್ಟ್ರದಲ್ಲಿ ಬಿ.ಜೆ.ಪಿ. ದಿಗ್ವಿಜಯ, ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ. ಸಂತಸ: ಸತೀಶ್ ಕುಂಪಲ
Saturday, November 23, 2024
ಮಂಗಳೂರು: ದೇಶದ ಪ್ರಮುಖ ರಾಜ್ಯ, ರಾಷ್ಟ್ರದ ಜನತೆ ಅತ್ಯಂತ ಕಾತರದಿಂದ ನಿರೀಕ್ಷಿಸುತ್ತಿದ್ದ ಮಹಾರಾಷ್ಟ್ರ ವಿಧಾನ ಸಭಾ ಚುನಾವಣೆಯಲ್ಲಿ ಬಿ.ಜೆ.ಪಿ. ನೇತೃತ್ವದ ಮಹಾಯುತಿ ಒಕ್ಕೂಟ ಅಮೋಘ ವಿಜಯವನ್ನು ಸಾಧಿಸಿದೆ.
ನರೇಂದ್ರ ಮೋದಿ ಯವರ ಸಮರ್ಥ ನೇತೃತ್ವಕ್ಕೆ, ರಾಜ್ಯದಲ್ಲಿ ಬಿ.ಜೆ.ಪಿ. ಸರ್ಕಾರ ಮಾಡಿರುವ ಅಭಿವೃದ್ಧಿಪರ ಮತ್ತು ಜನಪರ ಆಡಳಿತಕ್ಕೆ ಜನಮನ್ನಣೆ ನೀಡಿದ್ದಾರೆ. ಕಾಂಗ್ರೆಸ್‌ನ ಗ್ಯಾರಂಟಿ ಆಮಿಷಕ್ಕೆ ಬಲಿಯಾಗದೆ ರಾಜ್ಯದ ಅಭಿವೃದ್ಧಿಗೆ ಮಹಾರಾಷ್ಟ್ರದ ಜನತೆ ಪ್ರಬುದ್ದತೆಯಿಂದ ಮತದಾನಗೈದು ಬಿ.ಜೆ.ಪಿ. ಒಕ್ಕೂಟವನ್ನು ಮರಳಿ ಅಧಿಕಾರದ ಗದ್ದುಗೆಯಲ್ಲಿ ಕೂರಿಸಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ಸಂತಸ ವ್ಯಕ್ತಪಡಿಸಿದರು.