ಆರ್ಥಿಕಾಭಿವೃದ್ಧಿಗೆ ಮುನ್ನುಡಿ ಬರೆದವರು ಇಂದಿರಾ ಗಾಂಧಿ: ಬಿ. ರಮಾನಾಥ ರೈ

ಆರ್ಥಿಕಾಭಿವೃದ್ಧಿಗೆ ಮುನ್ನುಡಿ ಬರೆದವರು ಇಂದಿರಾ ಗಾಂಧಿ: ಬಿ. ರಮಾನಾಥ ರೈ


ಮಂಗಳೂರು: ಇಂದಿರಾ ಗಾಂಧಿ ಅವರು ಜನಪರ ಹಾಗೂ ರಾಷ್ಟ್ರ ಕೇಂದ್ರೀಕೃತ ನೀತಿಗಳಿಂದ ಜನಪ್ರಿಯವಾಗಿದ್ದರು. ಬ್ಯಾಂಕುಗಳ ರಾಷ್ಟ್ರೀಕರಣ, ಹಸಿರು ಕ್ರಾಂತಿಯ ಮೂಲಕ ದೇಶದ ಆರ್ಥಿಕಾಭಿವೃದ್ಧಿಗೆ ಮುನ್ನುಡಿ ಬರೆದರು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.

ಮಂಗಳವಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮದಿನ ಪ್ರಯುಕ್ತ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಬಳಿಕ ಮಾತನಾಡುತ್ತಿದ್ದರು.

ಇಂದಿರಾ ಗಾಂಧಿ ಅವರು ಸಾಮಾಜಿಕ ನ್ಯಾಯದಿಂದ ವಂಚಿತರಾದ ದುರ್ಬಲ ಜನರ ಪರವಾಗಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದರು. ಬಡಜನರ ಬಗೆಗಿನ ಕಾಳಜಿ, ಅವರ ಸ್ಥಿತಿಗತಿಗಳ ಸುಧಾರಣೆಗಾಗಿ ಕೈಗೊಂಡ ದಿಟ್ಟ ಕ್ರಮಗಳು ಇಂದಿರಾ ಗಾಂಧಿಯವರನ್ನು ಇಂದಿಗೂ ಜೀವಂತವಾಗಿರಿಸಿದೆ. ಸಾಲ ಮನ್ನ  ಜಾರಿಗೆ ತಂದು ಜನ ಸಾಮಾನ್ಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕಾರಣರಾದರು. ಭೂಮಸೂದೆ ಕಾಯ್ದೆ ಅತ್ಯಂತ ಪರಿಣಾಮಕಾರಿಯಾಗಿ ದ.ಕ. ಜಿಲ್ಲೆಯಲ್ಲಿ ಜಾರಿಯಾಗಿದೆ. ಬಿಜೆಪಿಗರು ಮತಕ್ಕಾಗಿ ಕೀಳುಮಟ್ಟದ ರಾಜಕೀಯ ಮಾಡಿ ಸಮಾಜವನ್ನು ಹೊಡೆಯುತ್ತಿದ್ದಾರೆ. ಮೂರ್ಖರು. ಸುಳ್ಳು ಸುದ್ದಿ ಹರಡುವ ಬಿಜೆಪಿಗರು ನಿಜವಾದ ದೇಶದ್ರೋಹಿಗಳು ಎಂದು ಹೇಳಿದರು.

ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಮಾತನಾಡಿ, ಇಂದಿರಾಗಾಂಧಿಯವರು ದೇಶಕೋಸ್ಕರ ಪ್ರಾಣ ತ್ಯಾಗ ಮಾಡಿದ ಧೀಮಂತ ಮಹಿಳೆ. ದೇಶದ ಏಕತೆಯ ದೃಷ್ಟಿಯಿಂದ ಅವರು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು. ಇಂದಿನ ಯಾವುದೇ ಸರ್ಕಾರಗಳು ಜಾರಿಗೆ ತರುವ ಜನಪರ ಯೋಜನೆಗಳಲ್ಲಿ ಇಂಧಿರಾ ಗಾಂಧಿ ಅವರ 20 ಅಂಶದ ಕಾರ್ಯಕ್ರಮ ಅಡಕವಾಗಿದೆ. ಹಸಿರು ಕ್ರಾಂತಿ, ಶ್ವೇತ ಕ್ರಾಂತಿ, ನೀಲ ಕ್ರಾಂತಿ, ಜಾತಿ ಪದ್ಧತಿ ನಿರ್ಮೂಲನೆ, ಬ್ಯಾಂಕುಗಳ ರಾಷ್ಟ್ರೀಕರಣ ಜಾರಿಗೊಳಿಸಿ ದೇಶದ ಆರ್ಥಿಕ ವೃದ್ಧಿಗೆ ಶಕ್ತಿ ತುಂಬಿದರು ಎಂದು ಸ್ಮರಿಸಿದರು.

ಜವಾಹರ್ ಲಾಲ್ ನೆಹರೂ, ಇಂದಿರಾ ಗಾಂಧಿ ಅವರ ಇತಿಹಾಸವನ್ನು ತಿರುಚಿ ಜನರ ಮನಸ್ಸಿನಲ್ಲಿ ದ್ವೇಷ ಹುಟ್ಟುವಂತೆ ಮಾಡಿ ನೇಪಥ್ಯಕ್ಕೆ ಸರಿಸುವ ಪ್ರಯತ್ನ ಬಿಜೆಪಿಗರು ನಡೆಸುತ್ತಿದ್ದಾರೆ ಎಂದರು.

ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹೀಂ, ಸ್ಟ್ಯಾನಿ ಆಳ್ವರಿಸ್ ಮಾತನಾಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವ, ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಸುರೇಶ್ ಬಳ್ಳಾಲ್, ಕೆ.ಹರಿನಾಥ್ ಶಾಹುಲ್ ಹಮೀದ್, ವಿಶ್ವಾಸ್ ಕುಮಾರ್ ದಾಸ್, ಶುಭೋದಯ ಆಳ್ವ, ದಿನೇಶ್ ಮೂಳೂರು, ಜೆ.ಅಬ್ದುಲ್ ಸಲೀಂ, ಪ್ರಕಾಶ್ ಸಾಲ್ಯಾನ್, ಕೆ.ಅಶ್ರಫ್, ಪದ್ಮನಾಭ ಅಮೀನ್, ಪದ್ಮನಾಭ ರೈ, ಸಂಶುದ್ದೀನ್ ಕುದ್ರೋಳಿ, ಚಿತ್ತರಂಜನ್ ಶೆಟ್ಟಿ, ಫಾರೂಕ್ ಫರಂಗಿಪೇಟೆ, ವಿಕಾಸ್ ಶೆಟ್ಟಿ, ಪ್ರೇಮ್ ನಾಥ್, ಗಿರೀಶ್ ಶೆಟ್ಟಿ ಕದ್ರಿ, ಟಿ.ಕೆ.ಸುಧೀರ್, ಸತೀಶ್ ಪೆಂಗಲ್, ಚೇತನ್ ಕುಮಾರ್, ಅಬ್ದುಲ್ ರಹಿಮಾನ್ ಕೋಡಿಜಾಲ್, ಶಬ್ಬೀರ್.ಎಸ್, ಯೋಗೀಶ್ ಕುಮಾರ್, ವಹಾಬ್ ಕುದ್ರೋಳಿ, ಮಕ್ಬೂಲ್ ಕುದ್ರೋಳಿ, ಪ್ರೇಮ್ ಬಳ್ಳಾಲ್ ಭಾಗ್, ನಿತ್ಯಾನಂದ ಶೆಟ್ಟಿ, ರೂಪ ಚೇತನ್, ರಮಾನಂದ ಪೂಜಾರಿ, ಸಮರ್ಥ್ ಭಟ್, ಜಾರ್ಜ್, ಶಾಂತಲಾ ಗಟ್ಟಿ, ಇಮ್ರಾನ್ ಎ.ಆರ್, ಜಿ.ಎ. ಜಲೀಲ್, ರವೀಂದ್ರ ಪೂಜಾರಿ, ಆಲ್ವಿನ್ ಪ್ರಕಾಶ್, ರಮ್ಲಾನ್ ಮಾರಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.

ಮಾಜಿ ಮೇಯರ್ ಶಶಿಧರ್ ಹೆಗ್ಡೆ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article