
ದೊಂಬಿ ಬೆಳಕಿನಲ್ಲಿ ‘ನರಕಾಸುರ ಮೋಕ್ಷ’ ಯಕ್ಷಗಾನ ಪ್ರದರ್ಶನ
Friday, November 1, 2024
ಮಂಜನಾಡಿ: ಶ್ರೀ ವಿಷ್ಣುಮೂರ್ತಿ ಜನಾರ್ದನ ಯಕ್ಷಗಾನ ಅಧ್ಯಯನ ಟ್ರಸ್ಟ್ (ರಿ) ವತಿಯಿಂದ ಮೂರನೇ ವರ್ಷದ ಯಕ್ಷದೀಪೋತ್ಸವ ಕಾರ್ಯಕ್ರಮದ ಅಂಗವಾಗಿ ಅ.31 ರಂದು ರಾತ್ರಿ ದೊಂಬಿ ಬೆಳಕಿನ ಯಕ್ಷಗಾನದೊಂದಿಗೆ ‘ನರಕಾಸುರ ಮೋಕ್ಷ’ ಯಕ್ಷಗಾನ ಪ್ರದರ್ಶನಗೊಂಡಿತು.
ಈ ಯಕ್ಷಗಾನವನ್ನು ಜಗದೀಶ್ ಗಟ್ಟಿ ಎಸ್. ಉಚ್ಚಿಲ್ ನಿರ್ದೇಶನ ಮಾಡಿದ್ದು, ರಾಜಶೇಖರ್ ಉಚ್ಚಿಲ್ ಮಾರ್ಗದರ್ಶನ ನೀಡಿದ್ದಾರೆ.
ಈ ಸಂದರ್ಭದಲ್ಲಿ ರಾಘವೇಂದ್ರ ರಾವ್ ಮಂಜನಾಡಿ ಮತ್ತು ಮನೋಜ್ ಗಟ್ಟಿ ಸಂಕೊಳಿಕೆ ಅವರನ್ನು ಸನ್ಮಾನಿಸಲಾಯಿತು.
ಯಕ್ಷಗಾನಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತರ ಮಂಜನಾಡಿಯ ಸುಬ್ರಹ್ಮಣ್ಯ ಭಟ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆ ರೂಪಶ್ರೀ ಪೂಜಾರಿ, ಮಂಗಳೂರಿನ ಪ್ರೆಸಿಡೆನ್ಸಿ ಕಾಲೇಜಿನ ಪ್ರಾಧ್ಯಾಪಕ ಡಾ. ದರ್ಶನ್‌ರಾಜ್, ವಿಜಯ ಪ್ರಮೀಣ್ ಅಸೈಗೋಳಿ, ಶಂಕರನಾರಾಯಣ ಭಟ್ ಅಸೈಗೋಳಿ ಉಪಸ್ಥಿತರಿದ್ದರು. ಗೌರವ ಉಪಸ್ಥಿತಿಯನ್ನು ಶ್ರೀ ಕ್ಷೇತ್ರ ಮಂಜನಾಡಿಯ ಆಡಳಿತ ಮೊಕ್ತೇಸರ ರಾಮ್‌ಮೋಹನ್ ಆಳ್ವ ವಹಿಸಿದ್ದರು.