ನ.10 ರಂದು ಶಿರ್ತಾಡಿಯಲ್ಲಿ ವಿಶ್ವಶಾಂತಿ ಯಾಗ

ನ.10 ರಂದು ಶಿರ್ತಾಡಿಯಲ್ಲಿ ವಿಶ್ವಶಾಂತಿ ಯಾಗ


ಮೂಡುಬಿದಿರೆ: ತಾಲೂಕಿನ ಶಿರ್ತಾಡಿಯ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿಸೇವಾ ಸಂಘದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಆಶೀರ್ವಾದಿತ ವಿಶ್ವಶಾಂತಿ ಯಾಗವು ನ. 10ರಂದು ನಡೆಯಲಿರುವುದಾಗಿ ಶಿರ್ತಾಡಿ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸೋಮನಾಥ ಶಾಂತಿ ಮತ್ತು ವಿಶ್ವಶಾಂತಿ ಯಾಗ ಸಂಚಾಲಕ ವಿಶ್ವನಾಥ ಕೋಟ್ಯಾನ್ ಹನ್ನೇರ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಶಿರ್ತಾಡಿ ಸಂಘದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನಿಡಿ ಮಾತನಾಡಿದ ಅವರು ಪೂರ್ವಾಹ್ನ ಉದಯ ಕಾಲದಿಂದ ಯಾಗ ಸಂಬಂಧಿತ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಗುರುಪೂಜೆ ನಡೆಯಲಿದೆ ಎಂದರು.

ಕರ್ನಾಟಕ ರಾಜ್ಯ ಆರ್ಯ ಈಡಿಗ ಮಹಾಸಂಸ್ಥಾನ ರೇಣುಕಾ ಮಠದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಅವರು  ಮಾತನಾಡಿ ಕೇರಳದ ಶಿವಗಿರಿಯಲ್ಲಿ ದಿನನಿತ್ಯ ನಡೆಯುವ ಶಾಂತಿಯಾಗವು ಪ್ರಸ್ತುತ ಶಿರ್ತಾಡಿಯಲ್ಲಿ ನಡೆಯಲಿದ್ದು ಸರ್ವರ ಸಹಬಾಳ್ವೆ ಮತ್ತು ಶಾಂತಿಗಾಗಿ ಪ್ರೇರೆಪಿಸಲಿದೆ ಎಂದು ಹೇಳಿದರು.

ಕೇರಳ ಶಿವಗಿರಿ ಮಠದ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಸ್ವಾಮೀಜಿ, ಕರ್ನಾಟಕ ರಾಜ್ಯ ಆರ್ಯ ಈಡಿಗ ಮಹಾಸಂಸ್ಥಾನ ರೇಣುಕಾ ಮಠದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ನಡೆಯಲಿರುವ ವಿಶ್ವಶಾಂತಿ ಯಾಗ ಕರ್ನಾಟಕ ರಾಜ್ಯ ಶ್ರೀ ನಾರಾಯಗುರು ವೈದಿಕ ಸಮಿತಿ ಮಂಗಳೂರು ಇವರ ಸಹಯೋಗದೊಂದಿಗೆ ನಡೆಯಲಿದ್ದು ಪೂರ್ವಾಹ್ನ 11 ಗಂಟೆಗೆ ಯಾಗ ಪೂರ್ಣಾಹುತಿಗೊಳ್ಳಲಿದೆ. ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ ಎಂದು ಅವರು ತಿಳಿಸಿದರು.

ಸಂಘದ ಗೌರವಾಧ್ಯಕ್ಷ ಅಶೋಕ್ ಕುಮಾರ್, ಪ್ರಧಾನ ಕಾರ್ಯದರ್ಶಿ ಕುಶಲ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಸುಗಂಧಿ ಕೃಷ್ಣ, ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಸುವರ್ಣ, ಜೊತೆ ಕಾರ್ಯದರ್ಶಿ ಕುಶಲ್ ಕುಮಾರ್, ಗೌರವ ಸಲಹೆಗಾರರಾದ ಪಿ.ಕೆ ರಾಜು ಪೂಜಾರಿ, ರುಕ್ಕಯ್ಯ ಪೂಜಾರಿ, ಲಕ್ಷ್ಮಣ ಕೋಟ್ಯಾನ್, ಅಪ್ಪು ಪೂಜಾರಿ, ರಾಘವ ಪಿ. ಸುವರ್ಣ, ಕೋಶಾಧಿಕಾರಿ ಸುರೇಂದ್ರ ಕಂದಿರು, ಪ್ರಮುಖರಾದ ನಾಭಿರಾಜ್, ಅಚ್ಚಪ್ಪ ಪೂಜಾರಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article