
ಕ.ರಾ.ಸ.ನೌ ಸಂಘದ ತಾಲೂಕು ಘಟಕದ ಅಧ್ಯಕ್ಷರಾಗಿ ಡಾ. ದೊರೆಸ್ವಾಮಿ ಕೆ.ಎನ್. ಆಯ್ಕೆ
Tuesday, November 19, 2024
ಮೂಡುಬಿದಿರೆ: ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ 2024-29ನೇ ಸಾಲಿಗೆ ನಡೆದ ಚುನಾವಣೆಯಲಿ ಮೂಡುಬಿದಿರೆ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಡಾ. ದೊರೆಸ್ವಾಮಿ ಕೆ.ಎನ್ ಪದವೀಧರ ಪ್ರಾಥಮಿಕ ಶಿಕ್ಷಕರು, ಶಾಲಾ ಶಿಕ್ಷಣ ಇಲಾಖೆ, ಖಜಾಂಚಿಯಾಗಿ ಶಾಂತಮ್ಮ ಆರೋಗ್ಯ, ಸಂರಕ್ಷಣಾಧಿಕಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ಪರಿಷತ್ ಸದಸ್ಯರಾಗಿ ರವೀಂದ್ರ ಅಂಕಲಗಿ, ಉಪವಲಯ ಅರಣ್ಯಾಧಿಕಾರಿ, ಆರಣ್ಯ ಇಲಾಖೆ, ಇವರು ಚುನಾಯಿತರಾಗಿದ್ದಾರೆ. ಕಾರ್ಯದರ್ಶಿಯಾಗಿ ಬಾಲಕೃಷ್ಣಗೌಡ ಬಿ ಸಹಶಿಕ್ಷಕರು ಸರಕಾರಿ ಪ್ರೌಢಶಾಲೆ ಪ್ರಾಂತ್ಯಇವರು ನೇಮಕಗೊಂಡಿರುತ್ತಾರೆ.
ಪ್ರಸನ್ನ ಕುಮಾರ್ ಬಿ. (ವಾಣಿಜ್ಯ ತೆರಿಗೆಗಳ ಇಲಾಖೆ), ಸುಭಾಷ್ ಚಂದ್ರ ಬಿ. ಕಮ್ಮಾರ (ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ), ಮಂಜುನಾಥ ಹೆಚ್ ಬಿ, ಕಿಶೋರ್ ಕುಮಾರ್ (ಕಂದಾಯ ಇಲಾಖೆ) ಪ್ರೇವಿ ಡಿ’ಸೋಜ, ಮೆಲ್ವಿನ್ ಶಿಲಾನಂದ ಅಬ್ಬುಕರ್ಕ, ಸುಧಾಕರ ಸಾಲ್ಯಾನ್, ಬಿ (ಪ್ರಾಥಮಿಕ ಶಾಲಾ ವಿಭಾಗ), ಲಿಡ್ತೀನ್ ಫೆರ್ನಾಂಡಿಸ್ (ಶಿಕ್ಷಣ ಇಲಾಖೆ) ದಿನೇಶ್ ಕುಮಾರ್ (ಪದವಿ ಪೂರ್ವ ಕಾಲೇಜು), ಸುಮಲತಾ, ಸುಮಾ ಎಲ್.ಆರ್., ಶುಭಲತಾ .ಜೆ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ), ಸಂತೋಷ್ ಡಿ.ಇ (ಭೂಮಾಪನ ಇಲಾಖೆ), ಅರುಣ್ ಕುಮಾರ್. ಪಿ (ನ್ಯಾಯಾಂಗ ಇಲಾಖೆ), ಗೋಪಾಲ್ ಬಿಸ್ಟ್, ಶ್ರೀಧರ ಅಣುಗೌಡರ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ), ನಾಗಪ್ಪ ಹೊರ್ತಿ (ಅಬಕಾರಿ ಇಲಾಖೆ), ಇವರು ನಿದೇರ್ಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶೀನಾ ನಾಯ್ಕ ಅವರು ಫೋಷಿಸಿದ್ದಾರೆ.