ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ವಿಶೇಷ ಮಕ್ಕಳನ್ನು ಸಾಮಾನ್ಯ ಮಕ್ಕಳಂತೆ ಬೆಳೆಸಿ: ಡಾ. ಮಧುಮಾಲ ಸಲಹೆ


ಮೂಡುಬಿದಿರೆ: ಜವಹರಲಾಲ್ ನೆಹರು ಅವರ ಜನ್ಮ ದಿನಾಚರಣೆಯ ಸವಿನೆಪಿಗಾಗಿ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಹಾಗೂ ತರಬೇತಿ ಕೇಂದ್ರದಲ್ಲಿ  ಮಕ್ಕಳ ದಿನವನ್ನು ಆಚರಿಸಲಾಯಿತು.

ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಡಾ. ಮಧುಮಾಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳಲ್ಲಿ ಸಾಮಾನ್ಯ ಜ್ಞಾನವನ್ನು ವೃದ್ಧಿಸಿ ಶಿಕ್ಷಣವನ್ನು ನೀಡಿ.  ವಿಶೇಷ ಚೇತನ ಮಕ್ಕಳನ್ನು ಕೂಡ ಸಾಮಾನ್ಯ ಮಕ್ಕಳಂತೆ ಅವರ ಕಾಲಲ್ಲಿ ನಿಲ್ಲುವಂತೆ ಮಾಡುವ  ಮಾಡಬೇಕಾಗಿದೆ. ಇಂದಿನ ಮಕ್ಕಳು ಫಾಸ್ಟ್ ಫುಡ್ , ಹೊಟೇಲ್ ಆಹಾರ ಪದಾರ್ಥಗಳನ್ನು ಅತಿಯಾಗಿ ಸೇವಿಸಿ ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪೋಷಕರು ಗಮನ ಕೊಡಬೇಕು. ಈಗ ಸೇವಿಸುವ ಆಹಾರ, ಹವಮಾನಗಳಿಂದ ಆರೋಗ್ಯದಲ್ಲಿ ಬೇಗನೇ ಏರುಪೇರುಗಳಾಗುತ್ತವೆ. ಎಂದ ಅವರು ಮಕ್ಕಳು ಊಟ ಮಾಡಲಿಲ್ಲವೆಂದು ಮೊಬೈಲ್ ಕೊಡುವುದು, ಕಂಪ್ಯೂಟರ್ ಅಳವಡಿಸುವುದು ಅಪಾಯಕಾರಿ. ಈ ವಿಚಾರಗಳ ಬಗ್ಗೆ ಹೆತ್ತವರು ಗಮನಹರಿಸುವುದು ಅತಿ ಅಗತ್ಯವೆಂದು ಸಲಹೆ ನೀಡಿದರು.

ಇದಕ್ಕೂ ಮೊದಲು ಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳಿಂದ ವಿಶೇಷ ಛದ್ಮ ವೇಷ ಸ್ಮರ್ಧೆ ನಡೆಯಿತು. ತೀರ್ಪುಗಾರರಾಗಿ ಪಿಂಗಾರ ಕಲಾವಿದೆರ್ ಬೆದ್ರ ಇದರ ಸ್ಥಾಪಕಾಧ್ಯಕ್ಷ ಮಣಿ ಕೋಟೆಬಾಗಿಲು, ರಂಗಭೂಮಿ ಕಲಾವಿದ ಸತೀಶ್ ಕಲ್ಲಮುಂಡ್ಕೂರು ಭಾಗವಹಿಸಿದರು.

ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಾದ ಆರಿಸ್, ಶಯನ್ ಮತ್ತು ಸಹಳಾನ್ನು ಗುರುತಿಸಿ ಗೌರವಿಸಲಾಯಿತು.

ಇಸ್ರೇಲ್ ಹೆಲ್ಪಿಂಗ್ ಫ್ರೆಂಡ್ಸ್ನ ಸುನೀಲ್ ಮೆಂಡೋನ್ಸಾ, ತರಕಾರಿ ವ್ಯಾಪಾರಸ್ಥ ಅನ್ವರ್, ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆಯ ಸ್ಥಾಪಕಾಧ್ಯಕ್ಷ ಪ್ರಕಾಶ್ ಜೆ ಶೆಟ್ಟಿಗಾರ್, ಮುಖ್ಯ ಶಿಕ್ಷಕಿ ಶರ್ಮಿಳಾ ವಾಸ್ ಈ ಸಂದರ್ಭದಲ್ಲಿದ್ದರು. 

 ಶಿಕ್ಷಕಿ ಅನಿತಾ ರೊಡ್ರಿಗಸ್ ಸ್ವಾಗತಿಸಿದರು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.

ರಮ್ಯಾ ಕಾರ್ಯಕ್ರಮ ನಿರೂಪಿಸಿದರು. ಸುರೇಖಾ ವಂದಿಸಿದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article