
ಮಾನಸಿಕ ಆರೋಗ್ಯದ ಕುರಿತು ಪಿ.ಆರ್ ಚಟುವಟಿಕೆ
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪದವಿ ಪತ್ರಿಕೋದ್ಯಮದ ಅಂತಿಮ ವಿಭಾಗದ ವಿದ್ಯಾರ್ಥಿಗಳಿಂದ ಜೈನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯದ ಕುರಿತು ಪಿ.ಆರ್. ಚಟುವಟಿಕೆಯನ್ನು ನಡೆಸಲಾಯಿತು.
ಇತ್ತೀಚಿನ ದಿನಗಳಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಗೊಂದಲಗಳು ಕಂಡುಬರುತ್ತಿದೆ ಅದರಲ್ಲೂ ವಿದ್ಯಾರ್ಥಿಗಳು ಹೆಚ್ಚಾಗಿ ಮಾನಸಿಕ ಒತ್ತಡಗಳಿಗೆ ಒಳಗಾಗುತಿರುವುದನ್ನು ಕಾಣುತ್ತೆವೆ ಹಾಗಾಗಿ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಕಾರ್ಯಕ್ರಮವನ್ನು ನವೆಂಬರ್ 6 ರಂದು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಒಟ್ಟು 60 ವಿದ್ಯಾರ್ಥಿಗಳಿದ್ದು, ಪಿ.ಪಿ.ಟಿ. ಮೂಲಕ ಮಾನಸಿಕ ಆರೋಗ್ಯದ ಅಗತ್ಯತೆ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ರೀತಿ,ದೇಹದ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಕುರಿತು ಮಾಹಿತಿಯನ್ನು ನೀಡಲಾಯಿತು. ನಂತರ ಸ್ಥಿತಿಸ್ಥಾಪಕತ್ವದ ಪ್ರಶ್ನಾವಳಿ ವಿದ್ಯಾರ್ಥಿಗಳಿಗೆ ಕೊಟ್ಟು ಅನೇಕ ಚಟುವಟಿಕೆಗಳನ್ನು ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅಂತಿಮ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಾದ ದಿಶಾ ಶೆಟ್ಟಿಗಾರ್, ರಕ್ಷಿತಾ ಪೂಜಾರಿ, ಸ್ವಾತಿ ಸಾಲ್ಯಾನ್, ಪ್ರಗತಿ ಶೆಟ್ಟಿ,ರಿಶಾಂತ್ ಮತ್ತು ಚಂದನ್ ಹಾಗೂ ಜೈನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಭಾಸ್ ಮತ್ತು ಸಹ ಶಿಕ್ಷಕಿ ಸವಿತಾ ಇದ್ದರು. ಪತ್ರಿಕಾ ವಿಭಾಗದ ಮುಖ್ಯಸ್ಥೆ ರಕ್ಷಿತಾ ಕುಮಾರಿ ಹಾಗೂ ಉಪನ್ಯಾಸಕಿ ದೀಕ್ಷಿತಾ ಕಾರ್ಯಕ್ರಮ ಸಂಯೋಜಿಸಿದರು.