.jpeg)
ಹಳೆ ಬಂದರು ಧಕ್ಕೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವರ ಬಂಧನ
Friday, November 8, 2024
ಮಂಗಳೂರು: ಹಳೆ ಬಂದರು ಧಕ್ಕೆ ಬಳಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಮಂಗಳೂರು ಉತ್ತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಬೀದರ್‌ನವನಾಗಿದ್ದು ಪ್ರಸ್ತುತ ಮೂಡುಬಿದಿರೆಯ ಅಪಾರ್ಚ್‌ಮೆಂಟ್‌ನಲ್ಲಿ ವಾಸವಿದ್ದ ಪ್ರಜ್ವಲ್ ಫಿನಾಯಸ್(28) ಮತ್ತು ಬಂಟ್ವಾಳದ ಪದ್ಮಸ್ಮಿತ್ ಅಧಿಕಾರಿ (28) ಬಂಧಿತ ಆರೋಪಿಗಳು.
ಗುರುವಾರ ಸಂಜೆ ನಗರದ ಬಂದರು ಉತ್ತರ ಧಕ್ಕೆಯ ಬಳಿ ದ್ವಿಚಕ್ರ ವಾಹನದಲ್ಲಿ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ಅವರ ವಶದಲ್ಲಿದ್ದ ಗಾಂಜಾ, ಮೊಬೈಲ್ ಫೋನ್, ದ್ವಿಚಕ್ರವಾಹನ ಸಹಿತ ಸುಮಾರು 25,000 ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.