ಡಿಜಿಟಲ್ ಅರೆಸ್ಟ್ ಎಂದು ನಂಬಿಸಿ ಮೋಸ: ಅಂತರ್ ರಾಜ್ಯ ಸೈಬರ್ ಕ್ರೈಂ ಆರೋಪಿಯ ಬಂಧನ

ಡಿಜಿಟಲ್ ಅರೆಸ್ಟ್ ಎಂದು ನಂಬಿಸಿ ಮೋಸ: ಅಂತರ್ ರಾಜ್ಯ ಸೈಬರ್ ಕ್ರೈಂ ಆರೋಪಿಯ ಬಂಧನ


ಮೂಲ್ಕಿ: ಡಿಜಿಟಲ್ ಅರೆಸ್ಟ್ ಎಂದು ನಂಬಿಸಿ ಲಕ್ಷಾಂತರ ರೂ. ಹಣವನ್ನು ತಮ್ಮ ಖಾತೆಗೆ ವರ್ಗಾಹಿಸಿಕೊಂಡ ಪ್ರಕರಣದಲ್ಲಿ ಭಾಗಿಯಾದ ಅಂತರ್ ರಾಜ್ಯ ಸೈಬರ್ ಕ್ರೈಂ ಆರೋಪಿಯನ್ನು ತಾಂತ್ರಿಕ ಮಾಹಿತಿ ಮತ್ತು ದಾಖಲಾತಿಗಳ ಆಧಾರದಲ್ಲಿ ಮೂಲ್ಕಿ ಪೊಲೀಸ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಯನ್ನು ಕೇರಳ ರಾಜ್ಯದ ಅಲಪುಝು, ಪಝವೀಡು ವಾಸುಪುತ್ತೇಚಿರ, ಪಲ್ಲತುರುತಿ ನಿವಾಸಿ ಮುಹಮ್ಮದ್ ಜುನೈತ್ ಆರ್. (26) ಎಂದು ಗುರುತಿಸಲಾಗಿದೆ.

ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಐಕಳ ಗ್ರಾಮದ ಆಶಿಕ್ ಟಿ.ಹೆಚ್. ಎಂಬವರನ್ನು ಮೇ.6 ರಿಂದ7 ರವರೆಗೆ ಯಾರೋ ವಂಚಕರು ಮೊಬೈಲ್‌ನಲ್ಲಿ ವಿಡಿಯೋ ಕರೆ ಮೂಲಕ ಡಿಜಿಟಲ್ ಅರೆಸ್ಟ್ ಎಂದು ನಂಬಿಸಿ Fedex ಫೆಡೆಕ್ಸ್ ಕಂಪನಿಯವರಿಗೆ ತನ್ನ ಹೆಸರಿನಲ್ಲಿ ಕಳುಹಿಸಿದ ಪಾರ್ಸಲ್‌ನಲ್ಲಿ ಮಾದಕ ವಸ್ತುಗಳು ಮತ್ತು ಇತರ ಸೊತ್ತುಗಳು ಇದೆ ತಿಳಿಸಿ ಈ ಬಗ್ಗೆ ಮುಂಬೈ ಕ್ರೈಂ ಬ್ರಾಂಚ್‌ನವರು ತನಿಖೆ ನಡೆಸುವುದಾಗಿ ಹೇಳಿ ಡಿಜಿಟಲ್ ಅರೆಸ್ಟ್ ಮಾಡಿ ಬ್ಯಾಂಕ್ ಆಕೌಂಟ್‌ಗಳ ಮಾಹಿತಿ ಪಡೆದು  ಆಶಿಕ್ ಟಿ.ಹೆಚ್. ಅವರ ಬ್ಯಾಂಕ್ ಅಕೌಂಟ್‌ನಿಂದ 2,19,972 ರೂ ಹಣವನ್ನು ತಮ್ಮ ಖಾತೆಗೆ ವರ್ಗಾಹಿಸಿ ಸೈಬರ್ ವಂಚನೆ ಮಾಡಿರುವ ಬಗ್ಗೆ ಮೇ 18ರಂದು ಮೂಲ್ಕಿ ಠಾಣೆಯಲ್ಲಿ ಆಶಿಕ್ ಟಿ.ಹೆಚ್. ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು.

ಈ ಪ್ರಕರಣದಲ್ಲಿ ತನಿಖೆಯನ್ನು ಕೈಗೊಂಡ ಮೂಲ್ಕಿ ಠಾಣಾ ಪೊಲೀಸ್ ನಿರೀಕ್ಷಕ ವಿದ್ಯಾಧರ ಡಿ. ಬಾಯ್ಕರಿಕರ್ ಮತ್ತು ಪಿ.ಎಸ್.ಐ. ಅನಿತಾ ಹೆಚ್.ಬಿ. ಹಾಗೂ ಸಿಬ್ಬಂದಿಗಳು ವಿವಿಧ ತಾಂತ್ರಿಕ ಮಾಹಿತಿ ಮತ್ತು ದಾಖಲಾತಿಗಳ ಆಧಾರದಲ್ಲಿ ಆರೋಪಿಗಳ ಮಾಹಿತಿ ಸಂಗ್ರಹಿಸಿ ಮೇ.24 ರಂದು ಕೇರಳ ನಿವಾಸಿ ಮುಹಮ್ಮದ್ ಜುನೈತ್ ಆರ್ ಎಂಬಾತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ನಿರ್ದೇಶನದಂತೆ ಮೂಲ್ಕಿ ಠಾಣಾ ನಿರೀಕ್ಷಕ ವಿದ್ಯಾಧರ ಡಿ. ಬಾಯ್ಕರಿಕರ್ ಅವರು ಕಾರ್ಯಚರಣೆ ನಡೆಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article