ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ವಾಣಿಜ್ಯ ಸಂಘದ ಚಟುವಟಿಕೆಗಳ ಉದ್ಘಾಟನೆ

ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ವಾಣಿಜ್ಯ ಸಂಘದ ಚಟುವಟಿಕೆಗಳ ಉದ್ಘಾಟನೆ


ಪುತ್ತೂರು: ‘ವಿದ್ಯಾರ್ಥಿ ಜೀವನ ಬಂಗಾರವಾಗಲು ವಿದ್ಯಾರ್ಥಿಯಾಗಿ ಕಠಿಣ ಪರಿಶ್ರಮ ಅಗತ್ಯ. ವೈಫಲ್ಯಗಳು ಯಶಸ್ಸಿನ ಭಾಗವೇ ಆಗಿರುವುದರಿಂದ ವೈಫಲ್ಯಗಳಿಗೆ ಸಿದ್ಧರಾಗಿರಿ ಮತ್ತು ಅದು ಯಶಸ್ಸನ್ನು ಸಾಧಿಸಲು ಸಹಕಾರಿ’ ಎಂದು ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ನಳಿನಾಕ್ಷಿ ಎ.ಎಸ್. ಹೇಳಿದರು. 

ಅವರು ಪುತ್ತೂರಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ 2024-25ನೇ ಸಾಲಿನ ವಾಣಿಜ್ಯ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರೆ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ಎಲ್ಲಾ ಸಾಧಕರನ್ನು ಅಭಿನಂದಿಸಿ, ವಿದ್ಯಾರ್ಥಿಗಳು ಸಕಾರಾತ್ಮಕ ಅಂಶಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಿದರು. ‘ಏನನ್ನಾದರೂ ಸಾಧಿಸಲು ಶಕ್ತಿ, ಸ್ಫೂರ್ತಿ ಜೊತೆಗೆ ಹೋರಾಟದ ಅಗತ್ಯವಿದೆ. ಸಮಯ ಯಾರನ್ನೂ, ಯಾವುದಕ್ಕೂ ಕಾಯುವುದಿಲ್ಲ. ಕಳೆದುಹೋದ ಸಮಯವು ಮತ್ತೆ ಬರಲಾರದು’ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ 2022-23ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯದ ಬಿಕಾಂ ಪರೀಕ್ಷೆಯಲ್ಲಿ 2ನೇ ರ‍್ಯಾಂಕ್ ಗಳಿಸಿದ ಮತ್ತು ಮೊದಲ ಪ್ರಯತ್ನದಲ್ಲಿಯೇ ಸಿಎ ಇಂಟರ್ ಮೀಡಿಯೇಟ್ ಎರಡೂ ಗುಂಪುಗಳನ್ನು ಪೂರ್ಣಗೊಳಿಸಿದ ರಿತೇಶ್ ರೈ ಎಂ. ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಸಿಎ ಫೌಂಡೇಶನ್ನ ಇತರ ಸಾಧಕರಿಗೆ ಪ್ರಾಂಶುಪಾಲರು ಸ್ಮರಣಿಕೆ ನೀಡಿ ಗೌರವಿಸಿದರು.

ವಿದ್ಯಾರ್ಥಿಗಳಾದ ತನ್ವೀರ್ ಪಿಂಟೋ ಸ್ವಾಗತಿಸಿದರು. ಸಿಮ್ರಾನ್ ತಾಜ್ ವಂದಿಸಿ, ಝಕಿಯಾ ಸನಾ ಕಾರ್ಯಕ್ರಮ ನಿರೂಪಿಸಿದರು.





Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article