
ಸಂತಫಿಲೋಮಿನ ಕಾಲೇಜಿನ ವಿದ್ಯಾರ್ಥಿನಿಯರು ಅಂತರ್ ವಿಶ್ವವಿದ್ಯಾನಿಲಯ ತಂಡಕ್ಕೆ ಆಯ್ಕೆ
Friday, November 15, 2024
ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಪುತ್ತೂರಿನ ವಿದ್ಯಾರ್ಥಿನಿಯರು 64 ಕೆ.ಜಿ. ವಿಭಾಗದ ಸೌತ್ ವೆಸ್ಟ್ ಝೋನ್ ವೇಟ್ ಲಿಫ್ಟಿಂಗ್ ಸ್ಪರ್ಧೆಗೆ ಅಂತರ್ ವಿಶ್ವವಿದ್ಯಾನಿಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಆಯ್ಕೆ ಟ್ರಯಲ್ ನಡೆಯಿತು. ಬ್ಯೂಲಾ ಪಿ.ಟಿ. 64 ಕೆ.ಜಿ. ವಿಭಾಗದ ವೇಟ್ ಲಿಫ್ಟಿಂಗ್ ಸ್ಪರ್ಧೆಗೆ ಆಯ್ಕೆಯಾದರು. ದ್ವಿತೀಯ ಬಿಎಸ್ಸಿಯ ಸ್ಪಂದನಾ ಅವರು 45 ಕೆ.ಜಿ. ವಿಭಾಗದಲ್ಲಿ ಆಯ್ಕೆಯಾದರು. ಆಂಧ್ರಪ್ರದೇಶದ ಗುಂಟೂರಿನಲ್ಲಿ ಸ್ಪರ್ಧೆ ನಡೆಯಲಿದೆ.