
ಸಂತ ಫಿಲೋಮಿನಾ ಪ.ಪೂ. ಕಾಲೇಜಿಗೆ ಸಮಗ್ರ ಪ್ರಶಸ್ತಿ
Friday, November 22, 2024
ಪುತ್ತೂರು: ಪ್ರಗತಿ ಸ್ಟಡಿ ಸೆಂಟರ್ ಪುತ್ತೂರು ಸಾರಥ್ಯದಲ್ಲಿ ನ.17 ರಂದು ನಡೆದ 'ಪ್ರಗತಿ ವೈಭವ -2024’ ತಾಲೂಕು ಮಟ್ಟದ ಪದವಿ ಪೂರ್ವ ವಿಭಾಗದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ದೇಶಭಕ್ತಿ ಗೀತೆಯಲ್ಲಿ ಪ್ರಾರ್ಥನಾ ಬಿ, ಕುಷಿ, ಹಿಮಾ, ಭವಿಷ್ಯ, ಶ್ರೀಲಕ್ಷ್ಮಿ , ರಶ್ವಿತ, ಜಾನಪದ ನೃತ್ಯದಲ್ಲಿ ಎಂ ದೀಪ ನಾಯಕ್, ಚಿನ್ಮಯ್, ರೋಹನ್ ತೋರಸ್, ಸ್ನೇಹ, ನಿಖಿತ, ಸಮೃದ್ಧಿ ಚೌಟ, ಆದಿತ್ಯ, ಸ್ವಸ್ತಿ, ಮೌಲ್ಯಾಧಾರಿತ ದೇಶಭಕ್ತಿ ನೃತ್ಯ ರೂಪಕದಲ್ಲಿ ತ್ರಿಶಾ ಕೆ ಬಿ, ಸುದೀಕ್ಷಾ, ಜ್ಞಾನ್ವಿ, ಮೇಘನಾ, ಇಂಚರ, ನಿಶ್ಮಿತಾ, ರೋಸ್ ಮರಿಯಾ, ಪ್ರಿನ್ಸಿ ಸಿಲ್ವಿ ಲೋಬೋ ಹಾಗೂ ನಿರೂಪಣೆಯಲ್ಲಿ ಸಕೀನಾ ಐಮನ್ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಕಾಲೇಜಿನ ಪ್ರಾಂಶುಪಾಲ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರದರ್ಶನ ಕಲಾ ಸಂಘದ ಸುಮನಾ ರಾವ್, ರಶ್ಮಿ ಪಿ ಎಸ್ ಹಾಗೂ ಭರತ್ ಜಿ. ಪೈ ಉಪಸ್ಥಿತರಿದ್ದರು.