
ತಲೆಂಜಿ ಗುಡ್ಡೆಯಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ
Saturday, November 23, 2024
ಪುತ್ತೂರು: ಬಡಗನ್ನೂರು ಗ್ರಾಮದಲ್ಲಿರುವ ತಲೆಂಜಿ ಸಾಮಾಜಿಕ ಅರಣ್ಯದ ಗೇರು ನೆಡುತೋಪುವಿನಲ್ಲಿ ವ್ಯಕ್ತಿಯೋರ್ವರು ಗೇರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ನೆರೆಯ ಅರಿಯಡ್ಕ ಗ್ರಾಮದ ಪಾಪೆಮಜಲು ನಿವಾಸಿ ಯೋಗೀಶ್ ಬಂಡಾರಿ (52) ಆತ್ಮಹತ್ಯೆ ಮಾಡಿಕೊಂಡವರು. ನೆರೆಯ ಕೇರಳದಲ್ಲಿರುವ ಪತ್ನಿಯ ಮನೆಯಲ್ಲಿ ವಾಸವಿದ್ದ ಇವರು ಕಿನ್ನಿಂಗಾರಿನಲ್ಲಿ ಸೆಲೂನ್ ನಡೆಸುತ್ತಿದ್ದರು.
ಶನಿವಾರ ಬೆಳಗ್ಗೆ ಕೊಲದ ಹಾಲಿನ ಡಿಪೋಗೆ ಹಾಲು ಕೊಂಡೊಯ್ಯುತ್ತಿದ್ದ ವ್ಯಕ್ತಿಯೋರ್ವರಿಗೆ ತಲೆಂಜಿ ಗುಡ್ಡದಲ್ಲಿ ಮೊಬೈಲ್ ರಿಂಗಣಿಸುವುದು ಕೇಳಿ ಬಂದಿದ್ದು, ಪರಿಶೀಲಿಸಿದಾಗ ಯೋಗೀಶ್ ಬಂಡಾರಿ ಗೇರು ಬೀಜದ ಮರಕ್ಕೆ ಬೈರಾಸಿನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿರುವುದು ಕಂಡುಬಂದಿದೆ.
ಮೃತರು ತಾಯಿ ಯಮುನಾ, ಪತ್ನಿ ನಳಿನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪುತ್ತೂರು ಗ್ರಾಮಾಂತರದ ಸಂಪ್ಯ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.