
ಕೆರೆಗೆ ಬಿದ್ದು ವ್ಯಕ್ತಿ ಸಾವು
Friday, November 8, 2024
ಪುತ್ತೂರು: ಕೆರೆಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಗುರುವಾರ ಪುತ್ತೂರು ತಾಲೂಕಿನ ಅರಿಯಡ್ಕ ಸಮೀಪದಲ್ಲಿ ನಡೆದಿದೆ.
ಅರಿಯಡ್ಕ ಗ್ರಾಮದ ಜಾರತ್ತಾರು ನಿವಾಸಿ ದಿನೇಶ್ ರೈ (45) ಮೃತಪಟ್ಟ ವ್ಯಕ್ತಿ. ಅವರು ತನ್ನ ಮನೆಯಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿರುವ ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ ಎಂಬವರಿಗೆ ಸೇರಿದ ಗುಡ್ಡದಲ್ಲಿರುವ ಟಾರ್ಪಲ್ ಹಾಸಿದ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ. ಅಲ್ಲಿಗೆ ದಿನೇಶ್ ರೈಯವರು ಸ್ಕೂಟರ್ನಲ್ಲಿ ತೆರಳಿದ್ದು ಅವರ ಸ್ಕೂಟರ್ ಕೆರೆಯ ಪಕ್ಕದಲ್ಲಿತ್ತು. ಪುತ್ತೂರು ಅಗ್ನಿಶಾಮಕ ದಳದವರು ಮೃತದೇಹವನ್ನು ಕೆರೆಯಿಂದ ಮೇಲಕ್ಕೆತ್ತಿದ್ದಾರೆ.
ಮೃತರು ಪತ್ನಿ, ಪುತ್ರಿ ಮತ್ತು ಬಂಧು ಬಳಗವನ್ನು ಅಗಲಿದ್ದಾರೆ. ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.