
ನಾಮ ಸ್ಮರಣೆ ಮಾಡುವುದು ಭಗವಂತನಿಗೆ ಅತ್ಯಂತ ಪ್ರೀಯವಾದ ಸೇವೆ: ಅರವಿಂದ ಅಯ್ಯಪ್ಪ ಸುತಗುಂಡಿ
ಸುಬ್ರಹ್ಮಣ್ಯ: ಭಗವಂತನ ನಾಮ ಸ್ಮರಣೆ ಮಾಡುವುದು ದೇವರಿಗೆ ಅತ್ಯಂತ ಪ್ರೀಯವಾದ ಸೇವೆಯಾಗಿದೆ. ಭಕ್ತಿಯಿಂದ ಭಜನೆ ಮಾಡಿದೆ ದೇವರು ಸಂಪ್ರೀತರಾಗಿ ಆಶೀರ್ವದಿಸುತ್ತಾರೆ ಎಂಬುದು ಹಿರಿಯರು ಕಂಡುಕೊಂಡ ಸತ್ಯ. ಭಜನೆ ಮೂಲಕ ಭಗವಂತನ ನಾಮ ಧ್ಯಾನ ಮಾಡುವುದು ಅತ್ಯಗತ್ಯ. ಭಜನೆಯು ಅತ್ಯಂತ ಶ್ರೀ ದೇವಳದಲ್ಲಿ ಅಹರ್ನಿಶಿಯಾಗಿ ಭಜನೆ ಮೂಲಕ ಭಗವಂತನ ಆರಾಧನೆಯು ಜಾತ್ರಾ ಮಹೋತ್ಸವದ ಆರಂಭದ ದಿನ ನಡೆಯುವುದು ಶುಭ ಸಂಕೇತ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಹೇಳಿದರು.
ಜಾತ್ರೋತ್ಸವದ ಆರಂಭದ ದಿನವಾದ ಬುಧವಾರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮಸಮ್ಮೇಳನ ಮಂಟಪದಲ್ಲಿ ಜಾತ್ರೋತ್ಸವದ ಅಂಗವಾಗಿ ನಡೆದ ಏಕಹಃ ಭಜನೆ ಅಖಂಡ ಭಜನೋತ್ಸವವನ್ನು ದೀಪ ಬೆಳಗುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಭಕ್ತರಿಗೆ ಶ್ರೀ ದೇವರ ಕೃಪೆ ಸದಾ ಇರಲಿ ಅವರ ಆಕಾಂಕ್ಷೆಗಳು ಈಡೇರುವಂತೆ ಶ್ರೀ ದೇವರು ಆಶೀರ್ವದಿಸಲಿ ಎನ್ನುವುದು ನಮ್ಮ ಪ್ರಾರ್ಥನೆ ಎಂದರು.
ದೇವಳದ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಶ್ರೀ ದೇವಳದ ಕಚೇರಿ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಎಕೌಂಟೆಂಟ್ ರಾಜಲಕ್ಷ್ಮಿ ಶೆಟ್ಟಿಗಾರ್, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ಕೃಷ್ಣಮೂರ್ತಿ ಭಟ್, ಮಾಧವ.ಡಿ, ಮಾಜಿ ಮಾಸ್ಟರ್‌ಪ್ಲಾನ್ ಸಮಿತಿ ಸದಸ್ಯ ಶಿವರಾಮ ರೈ, ಮಾಜಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ, ಗ್ರಾ.ಪಂ. ಸದಸ್ಯೆ ಸೌಮ್ಯಾ ಭರತ್, ನಿವೃತ್ತ ಮುಖ್ಯಗುರು ಕೆ.ಯಶವಂತ ರೈ, ವದ್ಯಾಸಾಗರ ಭಜನಾ ಸಂಗಮದ ಸಂಸ್ಥಾಪಕ ಗಣೇಶ್ ಪರ್ವತಮುಖಿ, ಸದಸ್ಯರಾದ ಕಾರ್ತಿಕ್ ವಿದ್ಯಾನಗರ, ಶೇಖರ್ ಕೇದಿಗೆಬನ, ಪ್ರಮುಖರಾದ ರವೀಂದ್ರ ಕುಮಾರ್ ರುದ್ರಪಾದ, ಎ.ಸುಬ್ರಹ್ಮಣ್ಯ ರಾವ್, ಗೋಪಾಲ ಎಣ್ಣೆಮಜಲು, ಲೋಕೇಶ್ ಬಿ.ಎನ್, ಪ್ರಕಾಶ್ ಸುಬ್ರಹ್ಮಣ್ಯ, ರತ್ನಾವತಿ ನೂಚಿಲ ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ, ಶ್ರೀ ದೇವಳದ ಯೋಗೀಶ್ ಎಂ. ವಿಟ್ಲ, ಭಾನುಮತಿ, ಪವಿತ್ರಾ, ಬಾಲಕೃಷ್ಣ ರೈ, ಸಂದೇಶ್ ನಾಯಕ್, ಬೆಳ್ಳಿ, ಸದಾನಂದ, ಅಶೋಕ್ ಅತ್ಯಡ್ಕ, ಎನ್.ಸಿ. ಸುಬ್ಬಪ್ಪ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.