ಕಲಾನರ್ತನ ಸಂಭ್ರಮ-2025: ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಕಲಾನರ್ತನ ಸಂಭ್ರಮ-2025: ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆ


ಉಡುಪಿ: ಕರಾವಳಿಯ ಪ್ರಸಿದ್ಧ ನೃತ್ಯ ತರಬೇತಿ ಸಂಸ್ಥೆಗಳಲ್ಲಿ ಒಂದಾದ ಕಲಾನರ್ತನ ಡಾನ್ಸ್ ಕ್ರೀವ್(ರಿ.) ಜನ್ನಾಡಿ ಇದರ ಕಲಾನರ್ತನ ಸಂಭ್ರಮ-2025 ಹಾಗೂ ರಾಜ್ಯ ಮಟ್ಟದ ಆಹ್ವಾನಿತ ನೃತ್ಯ ತಂಡಗಳ ನೃತ್ಯ ಸ್ಪರ್ಧೆಯ ಆಮಂತ್ರಣ ಪತ್ರಿಕೆಯನ್ನು ಶಿರೂರು ನೀರ್ಜೆಡ್ಡು ಶ್ರೀವಿನಾಯಕ ದೇವಸ್ಥಾನ,ಒಡೆಯನಕಲ್ಲು-ಹೆಗ್ಗುಂಜೆ ಇಲ್ಲಿ ಸಾಂಪ್ರದಾಯಿಕವಾಗಿ ಕುಣಿತ ಭಜನಾ ಕಾರ್ಯಕ್ರಮದ ಮೂಲಕ ನ.24 ರಂದು ಬಿಡುಗಡೆ ಮಾಡಲಾಯಿತು.

ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಪತಿ ಭಟ್ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಿವೃತ್ತ ಶಿಕ್ಷಕರಾದ ಚಂದ್ರಶೇಖರ್, ಗುರುರಾಜ್, ಜಯರಾಮ್ ಕುಲಾಲ್ ಜನ್ನಾಡಿ, ಆದಿತ್ಯ ಕೋಟ, ಮೋಹನದಾಸ್, ನರಸಿಂಹ ಮಣಿಯಾನಬೈಲು, ಪುಂಡಲೀಕ್ ಮೊಗವೀರ, ನಾಗರಾಜ್ ತೆಕ್ಕಟ್ಟೆ ಮುಂತಾದ ಗಣ್ಯರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಲಾನರ್ತನ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ರೇಖಾ ಪ್ರಭಾಕರ್ ಇಡೀ ಕಾರ್ಯಕ್ರಮದ ಔಚಿತ್ಯವನ್ನು ಪ್ರಸ್ತಾವನೆಯಲ್ಲಿ ತಿಳಿಸಿದರು. ಕಲಾನರ್ತನ ಸಂಸ್ಥೆಯ ಸಂಸ್ಥಾಪಕ ಮನೀಶ್ ಕುಲಾಲ್ ಜನ್ನಾಡಿ ಸ್ವಾಗತಿಸಿದರು. ಮಂಜುನಾಥ್ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 

ಈ ಸಂದರ್ಭದಲ್ಲಿ ಕಲಾನರ್ತನ ಸಂಸ್ಥೆಯ ಪೋಷಕರು, ವಿದ್ಯಾರ್ಥಿಗಳು, ಆಮಂತ್ರಿತರು, ಭಜನಾ ಮಂಡಳಿಯ ಭಜಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article