
ಚಾರ್ಮಾಡಿ ನದಿಯಲ್ಲಿ ಗೋವುಗಳ ತಲೆ ಸೇರಿದಂತೆ ಅವಶೇಷ ಪತ್ತೆ: ಅಕ್ರಮ ಗೋ ಮಾಂಸ ಮಾಡಿ ತ್ಯಾಜ್ಯ 11 ಗೋಣಿ ಚೀಲದಲ್ಲಿ ತುಂಬಿಸಿ ಬಿಸಾಡಿರುವ ಶಂಕೆ
Tuesday, December 17, 2024
ಬೆಳ್ತಂಗಡಿ: ಚಾರ್ಮಾಡಿ ಸೇತುವೆ ಬಳಿ ದನದ ತಲೆ ಸೇರಿದಂತೆ ಅವಶೇಷಗಳು ಸುಮಾರು ಹನ್ನೊಂದು ಗೋಣಿಯಲ್ಲಿ ಪತ್ತೆಯಾಗಿದೆ.
ಚಾರ್ಮಾಡಿ ಗ್ರಾಮದ ಅನ್ನಾರು ಎಂಬಲ್ಲಿ ಸೇತುವೆ ಅಡಿಯಲ್ಲಿ ಗೋಣಿ ಚೀಲದಲ್ಲಿ ತುಂಬಿಸಿಟ್ಟ ರೀತಿಯಲ್ಲಿ ದನದ ತಲೆ, ಚರ್ಮ, ಹಾಗೂ ಇತರ ಅವಶೇಷಗಳು ಪತ್ತೆಯಾಗಿದ್ದು, ಯಾರೋ ಅಕ್ರಮವಾಗಿ ದನದ ಮಾಂಸ ಮಾಡಿ ಉಳಿದ ತ್ಯಾಜ್ಯಗಳನ್ನು ಗೋಣಿಯಲ್ಲಿ ತುಂಬಿಸಿ ಇಲ್ಲಿ ತಂದು ಹಾಕಿರಬಹುದು ಎಂದು ಸಂಶಯಿಸಲಾಗಿದೆ. ಈ ಬಗ್ಗೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.