
ಡಿ.21 ರಂದು ನೃತ್ಯ ಲಹರಿ
Tuesday, December 17, 2024
ಮಂಗಳೂರು: ಮಂಗಳೂರಿನ ನೃತ್ಯಾಂಗನ್ ನೃತ್ಯ ಸಂಸ್ಥೆ, ಸಂತ ಅಲೋಶಿಯಸ್ ಸ್ವಾಯತ್ತ ವಿವಿಯ ರಂಗ ಅಧ್ಯಯನ ಕೇಂದ್ರದ ಸಹಯೋಗ ದೊಂದಿಗೆ ಡಿ.21 ರಂದು ಶಾಸ್ತ್ರೀಯ ಭರತನಾಟ್ಯ ಉತ್ಸವ ‘ನೃತ್ಯ ಲಹರಿ’ ಕಾರ್ಯಕ್ರಮ ನಡೆಯಲಿದೆ.
ಕಾಲೇಜಿನ ಎಲ್‌ಸಿಆರ್‌ಐ ಸಭಾಂಗಣದಲ್ಲಿ ಸಂಜೆ 6 ಗಂಟೆಗೆ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಬಳಿಕ ಚೆನ್ನೈಯ ಕಲಾವಿದೆ ಕಾವ್ಯಾ ಗಣೇಶ್ (ಡಾನ್ಸಿಂಗ್ ಟು ಹರ್ ಓನ್ ಟ್ಯೂನ್) ಏಕವ್ಯಕ್ತಿ ನೃತ್ಯವನ್ನು ಪ್ರಸ್ತುತಪಡಿಸುವರು. ಅನಂತರ ಮುಂಬೈಯ ಕಲಾವಿದೆ ಪ್ರಾಚಿ ಸಾಥಿ ‘ವೆನ್ ವಾಲ್ಸ್ ಡಾನ್ಸ್’ (ಭರತನಾಟ್ಯ, ವರ್ಲಿ ಕಲೆ ಮತ್ತು ತಲ್ಲೀನತೆಯ ಆನಿಮೇಷನ್ ಎಂಬ ಕಲ್ಪನೆಯ ಜುಗಲ್ಬಂದಿ) ಎಂಬ ಏಕವ್ಯಕ್ತಿ ನೃತ್ಯವನ್ನು ಸಾದರಪಡಿಸುವರು. ಕಾರ್ಯಕ್ರಮಕ್ಕೆ ಆಸಕ್ತರಿಗೆ ಮುಕ್ತ ಪ್ರವೇಶ ಎಂದು ನೃತ್ಯಾಂಗನ್ ಸಂಸ್ಥೆ ನಿರ್ದೇಶಕಿ ರಾಧಿಕಾ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.