ವಿದ್ಯುತ್ ಶಾಕ್ ಹೊಡೆದು ವಿದ್ಯಾರ್ಥಿ ಸಾವು
Thursday, December 19, 2024
ಬೆಳ್ತಂಗಡಿ: ವಿದ್ಯಾರ್ಥಿಯೊಬ್ಬ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದ ಘಟನೆ ಪೆರೊಡಿತ್ತಾಯನ ಕಟ್ಟೆ ಬಳಿ ಇಂದು ಬೆಳಗ್ಗೆ ನಡೆದಿದೆ.
ತೆಂಕಕಾರಂದೂರು ಪೆರೋಡಿತ್ತಾಯನಕಟ್ಟೆ ಶಾಲಾ ಬಳಿಯ ಮನೆಯ ಬೆಳ್ತಂಗಡಿ ಸಂತ ತೆರೇಸಾ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಸ್ಟೀಪನ್ (14) ಕ್ರಿಸ್ ಮಸ್ ಪ್ರಯುಕ್ತ ಇಂದು ಸಂಜೆ ಮನೆಗೆ ಸಾಂತಕ್ಲಾಸ್ ಬರುವ ಹಿನ್ನೆಲೆಯಲ್ಲಿ ಮನೆಗೆ ಗೋದಲಿ ಲೈಟಿಂಗ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿದೆ.
ಅವಘಡ ಸಂಭವಿಸಿದೆ ತಕ್ಷಣ ಆತನ ಅಜ್ಜಿ ಹಾಗೂ ದೊಡ್ಡಪ್ಪ ಸ್ಥಳೀಯ ಆಸ್ಪತ್ರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಷ್ವರಲ್ಲಾಗಲೇ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಈ ಬಾಲಕನ ತಂದೆ ತಾಯಿ ಎರಡು ವರ್ಷದ ಹಿಂದೆ ಮೃತ ಪಟ್ಟಿರುತ್ತಾರೆ. ತಮ್ಮ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಸ್ಥಳಕ್ಕೆ ವೇಣೂರು ಪೊಲೀಸ್ ಠಾಣಾಧಿಕಾರಿ ಶ್ರೀ ಶೈಲಾ, ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಕ್ಲೇಮೆಂಟ್ ಬ್ರಗ್ಸ್ ಘಟನಾ ಸ್ಥಳ ಕ್ಕೆ ಭೇಟಿ ನೀಡಿದರು.