ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ
Sunday, December 22, 2024
ಕಾಸರಗೋಡು: ಕ್ರಿಸ್ಮಸ್ ಆಚರಣೆ ನಡೆಯುತ್ತಿದ್ದಂತೆ ತಿರುವನಂತಪುರ ನೆಯ್ನಾಟಿಂಗರ ಚೆಂಗಲ್ ಸರಕಾರಿ ಯು.ಪಿ. ಶಾಲೆಯ ತರಗತಿ ಕೊಠಡಿಯಲ್ಲಿ 7ನೇ ತರಗತಿ ವಿದ್ಯಾರ್ಥಿನಿ ನೇಹಾ (12)ಳಿಗೆ ಹಾವು ಕಡಿದ ಘಟನೆ ನಡೆದಿದೆ. ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಾವನ್ನು ಶಾಲಾ ಅಧಿಕಾರಿಗಳು ಹೊಡೆದು ಸಾಯಿಸಿದ್ದಾರೆ.