ನಾಪತ್ತೆಯಾಗಿ ಮರಳಿ ಬಂದ ಯುವಕ-ಯುವತಿ ಮತ್ತೆ ನಾಪತ್ತೆ

ನಾಪತ್ತೆಯಾಗಿ ಮರಳಿ ಬಂದ ಯುವಕ-ಯುವತಿ ಮತ್ತೆ ನಾಪತ್ತೆ

ಕುಂಬಳೆ: ನಾಪತ್ತೆಯಾಗಿ ಬಳಿಕ ಮರಳಿ ಬಂದ ಯುವಕ ಹಾಗೂ ಯುವತಿ ಮತ್ತೆ ನಾಪತ್ತೆಯಾಗಿದ್ದಾರೆಂದು ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ವಿವಾಹ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಇವರು ಮತ್ತೆ ನಾಪತ್ತೆಯಾಗಿದ್ದಾರೆನ್ನಲಾಗಿದೆ.

ಇಚ್ಲಂಪಾಡಿ ಕೊಡ್ಯಮ್ಮೆ ಉಜಾರು ಹೌಸ್‌ನ ಅಹಮ್ಮದ್ ನೌಫಲ್ (30) ನಾಪತ್ತೆಯಾಗಿದ್ದು, ಈ ಸಂಬಂಧ ಮಾವ ಅಬೂಬಕರ್ ಸಿದ್ದಿಕ್ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದರು. ಡಿ. 18ರಂದು ರಾತ್ರಿ 11.30ರಿಂದ ಅಹಮ್ಮದ್ ನೌಫಲ್ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿತ್ತು. ಆತನ ಜತೆಗೆ ಪ್ರಿಯತಮೆ ಇರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿತ್ತು. ಅಹಮ್ಮದ್ ನೌಫಲ್ ಹಾಗೂ ಉಳುವಾರು ನಿವಾಸಿಯಾದ ನಸ್ರೀನಾ (19) ಪರಸ್ಪರ ಪ್ರೀತಿಸುತ್ತಿದ್ದರು. ಈಕೆ ಡಿ. 13ರ ರಾತ್ರಿ ಮನೆಯಿಂದ ನಾಪತ್ತೆಯಾಗಿದ್ದಳು.

ಈ ಬಗ್ಗೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಂತೆ ಇಬ್ಬರೂ ಮರಳಿ ಬಂದಿದ್ದರು. ಅವರು ಇಬ್ಬರೂ ಮದುವೆ ಮಾಡಬೇಕೆಂದು ಆಗ್ರಹಿಸಿದ್ದರು. ಆದರೆ ವಿವಾಹ ಮಾಡಿಕೊಡಲು ನಿರಾಕರಿಸಿದ್ದಾಗಿ ಹೇಳಲಾಗಿದೆ. ಹೀಗಾಗಿ ಮತ್ತೆ ಇವರಿಬ್ಬರು ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article