
ಮಾರ್ಚ್ 1 ರಿಂದ ಅಬುಧಾಬಿಗೆ ವಿಮಾನ
Wednesday, December 25, 2024
ಮಂಗಳೂರು: ಏರ್ಲೈನ್ ಬೆಂಗಳೂರು ಮತ್ತು ಅಹಮದಾಬಾದಿನಿಂದ ಅಬುಧಾಬಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ಫ್ಲೈಟ್ಗಳನ್ನು ಹೊಸ ವರ್ಷ ಮಾರ್ಚ್ 1ರಿಂದ ಆರಂಭಿಸಲಿದೆ.
ಈ ಜುಲೈನಲ್ಲಿ ಮುಂಬೈ ಮತ್ತು ಅಬುಧಾಬಿ ಮಧ್ಯೆ ಆಕಾಸ ಏರ್ ದೈನಂದಿನ ಸರ್ವೀಸನ್ನು ಆರಂಭಿಸಿತ್ತು. ಇದರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಆಕಾಸ ಏರ್ನ ಅಸ್ತಿತ್ವ ಇನ್ನಷ್ಟು ಹೆಚ್ಚಾಗಿದೆ. ಆಕಾಸ ಏರ್ ವೆಬ್ಸೈಟ್ www.akasaair.com ಆಂಡ್ರಾಯ್ಡ್ ಮತ್ತು ಐಒಎಸ್ ಆಪ್ನಲ್ಲಿ ಬುಕಿಂಗ್ಗಳು ಆರಂಭವಾಗಿದ್ದು, ಹಲವು ಪ್ರಮುಖ ಒಟಿಎಗಳಿಂದಲೂ ಬುಕ್ ಮಾಡಬಹುದಾಗಿದೆ ಎಂದು ಸಂಸ್ಥೆಯ ಸಹಸಂಸ್ಥಾಪಕ ಮತ್ತು ಮುಖ್ಯ ವಾಣಿಜ್ಯ ಅಧಿಕಾರಿ ಪ್ರವೀಣ್ ಅಯ್ಯರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.