ಪಂಚ ಗ್ಯಾರಂಟಿ: 1464.22 ಕೋಟಿ ರೂ. ವ್ಯಯ

ಪಂಚ ಗ್ಯಾರಂಟಿ: 1464.22 ಕೋಟಿ ರೂ. ವ್ಯಯ


ಮಂಗಳೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಕಳೆದ ಸೆಪ್ಟಂಬರ್ ತನಕ 1464.22 ಕೋಟಿ ರೂ ವ್ಯಯಿಸಲಾಗಿದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳಿಂದ ಸುಮಾರು 6.91 ಕೋಟಿ ಫಲಾನುಭವಿಗಳು ಪ್ರಯೋಜನೆ ಪಡೆದುಕೊಂಡಿದ್ದಾರೆ ಎಂದು ಗ್ಯಾರಂಟಿ ದಕ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಅವರು ಹೇಳಿದರು.

ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಶನಿವಾರ ಆಯೋಜಿಸಿದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಒಟ್ಟು 4,240 ಮಂದಿ ಯುವನಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದು, ಈ ಪೈಕಿ ಈಗಾಘಲೇ 3,643 ಫಲಾನುಭವಿಗಳಿಗೆ ಅಕ್ಟೋಬರ್ (2024) ಅಂತ್ಯಕ್ಕೆ 3,87,94,500 (3.88) ಕೋಟಿ ರೂ ಫಲಾನುಭವಿ ಖಾತೆಗೆ ಜಮಾ ಆಗಿದೆ. ಗೃಹಲಕ್ಷ್ಮೀ ಯೋಜನೆಯಡಲ್ಲಿ 3,72,300 ಲಕ್ಷ ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು, ಅವರ ಖಾತೆಗೆ ಕಳೆದ ಸೆಪ್ಟಂಬರ್ ಅಂತ್ಯಕ್ಕೆ 943.41 ಕೋಟಿ ರೂ ಜಮೆಯಾಗಿದೆ. ಶಕ್ತಿ ಯೋಜನೆಯಲ್ಲಿ ಸರ್ಕಾರಿ ಬಸ್‌ಗಳಲ್ಲಿ  ಕಳೆದ ನವೆಂಬರ್ ತನಕ 6.79 ಲಕ್ಷ ಮಹಳಾ ಪ್ರಯಾಣಿಕರು ಸೌಲಭ್ಯ ಪಡೆದುಕೊಂಡಿದ್ದು, ಇದರ ಒಟ್ಟು ಪ್ರಯಾಣ ವೆಚ್ಚ 29.86 ಕೋಟಿ ರೂ ಆಗಿರುತ್ತದೆ. ಅನ್ನ ಭಾಗ್ಯ ಯೋಜನೆಯಲ್ಲಿ 219.60 ಕೋಟಿ ಖರ್ಚು ನಡೆಸಲಾಗಿದೆ. ಗೃಹಜ್ಯೋತಿ ಯೋಜನೆಯಲ್ಲಿ 2023-24 ನೇ ಸಾಲಿನಲ್ಲಿ 276.87 ಕೋಟಿ ರೂ ಹಾಗೂ 2024-25 ನೇ ಶಾಲಿನಲ್ಲಿ ನವೆಂಬರ್ ತನಕ 282.03 ಕೋಟಿ ರೂ ಫಲಾನುಭವಿಗಳಿಗೆ ವ್ಯಯವಾಗಿರುತ್ತದೆ ಎಂದು ಅವರು ಯೋಜನೆಯ ಅಂಕಿಅಂಶ ಮುಂದಿಟ್ಟರು.

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿಯಾಗುತ್ತದೆ, ಮನೆಯಲ್ಲಿ ಅತ್ತೆ-ಸೊಸೆ ನಡುವೆ ಕಲಹ ಶುರುವಾಗುತ್ತದೆ, ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ ಎನ್ನುವ ವಿರೋ ಪಕ್ಷಗಳ ಟೀಕೆಗೆ ಉತ್ತರ ದೊರೆತ್ತಿದೆ. ಕರ್ನಾಟಕದ ಜಿಡಿಪಿ ದೇಶದಲ್ಲೇ ಮೊದಲ ಸ್ಥಾನಕ್ಕೆ ತಲುಪಿದೆ. ಯೋಜನೆಯಲ್ಲಿ ದೊರೆತ ಹಣವನ್ನು ಕೂಡಿಟ್ಟು ಅತ್ತೆ- ಸೊಸೆ ಸೇರಿ ಮನೆಗೆ ಬೋರ್‌ವೆಲ್ ಕೊರೆಯಿಸಿದ ಯಶೋಗಾಥೆ ಸೃಷ್ಟಿಯಾಗಿದೆ ಎಂದು ಅವರು ತಿಳಿಸಿದರು.

ಈ ಯೋಜನೆಯ ಹಣ ಮಧ್ಯವರ್ತಿಗಳ ಸಹಾಯವಿಲ್ಲದೆ ಫಲಾನುಭವಿಗಳಿಗೆ ನೇರ ತಲುಪುತ್ತಿದ್ದು, ಇತರರಿಗೆ ಪರ್ಸಂಟೇಜ್ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೆಲವರು ಗ್ಯಾರಂಟಿ ಯೋಜನೆಯಿಂದ ಕ್ಷೇತ್ರದ ಇತರ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ರಾಜ್ಯದ ಇತರ ಜಿಲ್ಲೆಗಳಿಗೆ ಯುವ ನಿಧಿ ಯೋಜನೆಗೆ ದಕ್ಷಿಣ ಕನ್ನಡದಲ್ಲಿ ಫಲಾನುಭವಿಗಳು ಕಡಿಮೆ. ಜಿಲ್ಲೆ 21 ನೇ ಸ್ಥಾನದಲ್ಲಿದೆ. ಹೆಚ್ಚು ಸುಶಿಕ್ಷಿತವಾಗಿರುವ ಜಿಲ್ಲೆಯ ಯುವಜನರು ಹೆಚ್ಚಿನವರು ಪದವಿ ಬಳಿಕ ಕೂಡ ಶಿಕ್ಷಣ ಮುಂದುವರಿಸುತ್ತಾರೆ. ಶಿಕ್ಷಣ ಮುಂದುವರಿಸದ ಇತರರು ಒಂದಿಲ್ಲೊಂದು ಉದ್ಯೋಗಕ್ಕೆ ಸೇರಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಕೆಲವು ತಾಂತ್ರಿ ಕಾರಣಗಳಿಂದ ಬಿಪಿಎಲ್ ಪಡಿತರ ಇರುವ ಅನೇಕ ಕುಟುಂಬಗಳು ತೆರಿಗೆ ಪಾವತಿಸುವವರ ವ್ಯಾಪ್ತಿಗೆ ಬಂದಿರುವ ಕಾರಣ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾಗುವ ಅವಕಾಶದಿಂದ ವಂಚಿತರಾಗಿರುವ ಕುಟುಂಬಗಳಿವೆ. ಈ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ನಡೆದಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಸ್ವಾಗತಿಸಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ, ಕೋಶಾಕಾರಿ ಪುಷ್ಪರಾಜ್ ಶೆಟ್ಟಿ ಬಿ.ಎನ್. ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article