ಡಿ.16 ರಂದು ಕಾರ್ಗಿಲ್ ‘ವಿಜಯ ದಿವಸ’
Friday, December 13, 2024
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ಡಿ.16ರಂದು ಬೆಳಗ್ಗೆ 9 ಗಂಟೆಗೆ ‘ವಿಜಯ ದಿವಸ’ ಅಚರಣೆಯ ಕಾರ್ಯಕ್ರಮ ನಗರದ ಕದ್ರಿ ಹಿಲ್ಸ್ನಲ್ಲಿರುವ ಯೋಧರ ಯುದ್ದಸ್ಮಾರಕದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ವೀರ ಯೋಧರು ಮಾಡಿದ ತ್ಯಾಗ ಮತ್ತು ಬಲಿದಾನಗಳನ್ನು ನೆನಪಿಸುತ್ತಾ ಆಚರಿಸುತ್ತಿದ್ದೇವೆ. ಯುದ್ದಸ್ಮಾರಕದಲ್ಲಿ ಹೂಹಾರಗಳನ್ನು ಅರ್ಪಿಸಿ ಪ್ರಾರ್ಥನೆಯೊಂದಿಗೆ ನಮನ ಸಲ್ಲಿಸಲಾಗುವುದು ಎಂದರು.
ಸಂಘದ ಮಾರ್ಗದರ್ಶಕ ಕರ್ನಲ್ ಎನ್.ಶರತ್ ಭಂಡಾರಿ ಮಾತನಾಡಿ, ವಿಜಯ ದಿವಸವನ್ನು ನಮ್ಮ ದೇಶದಲ್ಲಿ ಡಿ.16ರಂದು ಆಚರಿಸುವುದು ರೂಢಿಯಾಗಿದೆ. 1971ನೇ ಇಸವಿ ಡಿ.16ರಂದು ಭಾರತವು ಪಾಕಿಸ್ತಾನದ ಮೇಲೆ ವಿಜಯ ಸಾಧಿಸಿದ ದಿನವಿದು ಎಂದರು.
ಈ ಸಂದರ್ಭ ಉಪಾಧ್ಯಕ್ಷ ಕರ್ನಲ್ ಜಯಚಂದ್ರನ್, ಕಾರ್ಯದರ್ಶಿ ದೀಪಕ್ ಅಡ್ಯಂತಾಯ, ಕೋಶಾಧಿಕಾರಿ ಪಿ.ಒ. ಸುಧೀರ್ ಪೈ ಉಪಸ್ಥಿತರಿದ್ದರು.