
ಕಾರಿನಲ್ಲಿ ಬೆಂಕಿ ಅವಘಡ
Monday, December 16, 2024
ಮಂಗಳೂರು: ನಗರದ ಸಿಟಿ ಸೆಂಟರ್ ಬಳಿ ಕಾರಿನಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಇಂದು ನಡೆದಿದೆ.
ಮಹಿಳೆಯೊಬ್ಬರು ಕಾರನ್ನು ಚಲಾಯಿಸುತ್ತಾ ಫ್ಲ್ಯಾಟ್ ಬಳಿ ತಂದು ನಿಲ್ಲಿಸಿದೊಡನೆ ಹೊಗೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ತಕ್ಷಣ ಅವರು ಅದರಿಂದ ಇಳಿದಿದ್ದಾರೆ. ಅಷ್ಟರಲ್ಲೇ ಕಾರು ಬೆಂಕಿಗೆ
ಆಹುತಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಗ್ನಿ ಶಾಮಕ ದಳದವರು ಸ್ಥಳಕ್ಕೆ ತೆರಳಿ ಬೆಂಕಿ ನಿಯಂತ್ರಿಸಿದ್ದಾರೆ.