ಮನಸ್ಸಿನ ಚಂಚಲತೆ ನಿಯಂತ್ರಣಕ್ಕೆ ಪ್ರಾಣಯಾಮ: ಸ್ವಾಮೀ ಜಿತಕಾಮಾನಂದಜೀ ಮಹಾರಾಜ್

ಮನಸ್ಸಿನ ಚಂಚಲತೆ ನಿಯಂತ್ರಣಕ್ಕೆ ಪ್ರಾಣಯಾಮ: ಸ್ವಾಮೀ ಜಿತಕಾಮಾನಂದಜೀ ಮಹಾರಾಜ್


ಮಂಗಳೂರು: ಅಷ್ಟಾಂಗ ಯೋಗದ ನಾಲ್ಕನೇ ಮೆಟ್ಟಿಲೇ ‘ಪ್ರಾಣಯಾಮ’. ಪ್ರಾಣಕ್ಕೆ ಹೊಸ ಒಂದು ಆಯಾಮವೇ ಪ್ರಾಣಯಾಮ. ಈ ಪ್ರಾಣಾಯಾಮವು ಉಸಿರಾಟದ ಮೇಲೆ ಹಿಡಿತವುಂಟು ಮಾಡುವುದಲ್ಲದೆ, ಸಕ್ರಮಗೊಳಿಸಿ ಶ್ವಾಸಕೋಶದ ಮತ್ತು ನರಮಂಡಲದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಶ್ರೀ ರಾಮಕೃಷ್ಣಮಠದ ಅಧ್ಯಕ್ಷರಾದ ಸ್ವಾಮೀ ಜಿತಕಾಮಾನಂದಜೀ ಮಹಾರಾಜ್ ಹೇಳಿದರು.

ಅವರು ಇಂದು ನಗರದ ಮಂಗಳಾದೇವಿ ಸಮೀಪದಲ್ಲಿರುವ ಶ್ರೀ ರಾಮಕೃಷ್ಣಮಠದಲ್ಲಿ ನಡೆಯುವ ಡಿಸೆಂಬರ್ ತಿಂಗಳ ಯೋಗ ಶಿಬಿರವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ನಾಡಿ ಶುದ್ಧಿಯಾಗಿ ಮನಸ್ಸಿನ ಚಂಚಲತೆ ಇಲ್ಲದಾಗಿ ಅದು ಶಾಂತವಾಗುವುದು. ಸಂಯಮ ಉಂಟಾಗುವುದು, ವೈಜ್ಞಾನಿಕವಾಗಿ ಹೇಳುವುದಾದರೆ ನಮ್ಮ ಪ್ರಾಣಮಯ ಕೋಶದ ಶುದ್ಧಿಕರಣವಾಗಿ ಅದು ಸಕ್ತವಾಗುವುದು. ಪ್ರಾಣಾಯಾಮವು ಪ್ರಾಚೀನ ಉಸಿರಾಟದ ತಂತ್ರವಾಗಿದ್ದು, ಇದು ಭಾರತದಲ್ಲಿ ಯೋಗ ಅಭ್ಯಾಸಗಳಿಂದ ಹುಟ್ಟಿಕೊಂಡಿದೆ. ಇದು ವಿಭಿನ್ನ ಶೈಲಿಗಳಲ್ಲಿ ನಿಮ್ಮ ಉಸಿರಾಟವನ್ನು ನಿಯಂತ್ರಿಸುವುದನ್ನು ಒಳಗೊಂಡಿರುತ್ತದೆ ಎಂದರು.

ಪ್ರಾಣಾಯಾಮ ಅಭ್ಯಾಸದಿಂದ ಬರುವ ಅನೇಕ ಆರೋಗ್ಯ ಪ್ರಯೋಜನಗಳಿಂದಾಗಿ ಇದು ಇತ್ತೀಚೆಗೆ ಪಾಶ್ಚಿಮಾತ್ಯ ಜಗತ್ತಿನಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಪ್ರಾಣಾಯಾಮವನ್ನು ಯೋಗದ ಜೊತೆಗೆ ಸಾಮಾನ್ಯವಾಗಿ ಅಭ್ಯಾಸಮಾಡಲಾಗುತ್ತದೆ. ಇದನ್ನು ಯೋಗದ ನಾಲ್ಕನೇ ಅಂಗ ಎಂದು ಕರೆಯಲಾಗುತ್ತದೆ. ಪ್ರಾಣಾಯಾಮವನ್ನು ವಿಜ್ಞಾನವೆಂದು ಪರಿಗಣಿಸಲಾಗಿದೆ. ನಿಮ್ಮ ಉಸಿರಾಟವನ್ನು ನಿಯಂತ್ರಿಸುವ ಮೂಲಕ ನಿಮ್ಮ ಮನಸ್ಸಿನ ಶಕ್ತಿಯನ್ನು ನೀವು ನಿಯಂತ್ರಿಸಬಹುದು ಎಂದು ನಂಬಲಾಗಿದೆ ಎಂದು ತಿಳಿಸಿದರು.

ಡಿಸೆಬರ್ ತಿಂಗಳ ರಾಮಕೃಷ್ಣ ಆಶ್ರಮದಲ್ಲಿ ನಡೆಯುವ ಯೋಗ ಶಿಬಿರದ ಮುಖ್ಯ ಅತಿಥಿ ಡಾ. ಜೀವರಾಜ ಸೊರಕೆ ಅವರು ಯೋಗದ ಪ್ರಯೋಜನ ಬಗ್ಗೆ ಮಾಹಿತಿ ನೀಡಿ, ದೈಹಿಕ ಆರೋಗ್ಯ ಮತ್ತು ಚಿತ್ತ ಶಾಂತಿ ನಮ್ಮ ಆರೋಗ್ಯ ಭಾಗ್ಯಕ್ಕೆ ಯೋಗವನ್ನು ನಿತ್ಯ ನಿರಂತರ ಮಾಡಿದರೆ ಮಾತ್ರ ಅದರ ಫಲ ಪ್ರಾಪ್ತಿಯಾಗುತ್ತದೆ. ನಾನು ಸುಮಾರು 20 ವರ್ಷಗಳಿಂದ ಮಾಡುತ್ತಾ ಬಂದಿದ್ದೇನೆ. ನನ್ನ ಈ 76 ವಯಸ್ಸಿನಲ್ಲಿಯೂ ನನಗೆ ಯಾವುದೇ ರೀತಿಯ ಖಾಯಿಲೆಗಳಿಲ್ಲ ಆರೋಗ್ಯವಾಗಿದ್ದೇನೆ. ಹಾಗೆ ನನ್ನ ಅನುಭವದ ಪ್ರಕಾರ ಗ್ಯಾಸ್ಟ್ರಿಕ್, ಬೆನ್ನುನೋವು ಸೊಂಟನೋವು ಇವೆಲ್ಲಾ ಯೋಗದ ಮೂಲಕ ನಿಯಂತ್ರಣಪಡಿಸಲು ಬಹಳ ಸಹಕಾರಿಯಾಗುತ್ತದೆ. ಹಾಗೆ ನಮ್ಮ ಆರೋಗ್ಯಭಾಗ್ಯಕ್ಕೂ ಸಹಕಾರಿಯಾಗುತ್ತದೆ. ಆದರೆ ಯೋಗವನ್ನು ದಿನಕ್ಕೆ ಕನಿಷ್ಠ 30 ನಿಮಿಷವಾದರೂ ಮಾಡಿದರೆ ನಮಗೆ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಡಾ. ಜೀವರಾಜ ಸೊರಕೆ ಅವರನ್ನು ಸ್ವಾಮಿ ಜಿತಕಾಮಾನಂದಜೀ ಸನ್ಮಾನಿಸಿದರು.

ದೇಲಂಪಾಡಿ ಶಿಷ್ಯರಾದ ತುಕರಾಮ, ಚಂದ್ರಹಾಸ ಬಾಳ ಹಾಗೂ ಶ್ರೀಲಕ್ಷ್ಮೀ ಇವರು ಸಹಕರಿಸಿದರು.








Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article