ನೂತನ ರಸ್ತೆ ಕಾಮಗಾರಿಯ ಉದ್ಘಾಟನೆ: ಗುದ್ದಲಿ ಪೂಜೆ
Saturday, December 7, 2024
ಮಂಗಳೂರು: ವಾರ್ಡ್-03 ಕಾಟಿಪಳ್ಳದಲ್ಲಿ 10 ಲಕ್ಷ ಮೊತ್ತದ ರಸ್ತೆ ಕಾಮಗಾರಿಯ ಉದ್ಘಾಟನೆ ಮತ್ತು 10 ಲಕ್ಷದ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಶಾಸಕ ಡಾ. ವೈ. ಭರತ್ ಶೆಟ್ಟಿ ನೆರವೇರಿಸಿದರು.
ಕಾಟಿಪಳ್ಳ 3ನೇ ವಾರ್ಡ್ ವಾರ್ಡ್ ವ್ಯಾಪ್ತಿಯ ವಾಸುಕಿ ನಗರ 3ನೇ ಅಡ್ಡರಸ್ತೆಯ 10 ಲಕ್ಷದ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿದರು.
ವಾಸುಕಿ ನಗರದ ಬಳಿ 10 ಲಕ್ಷದ ರಸ್ತೆ ಕಾಮಗಾರಿಗೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮನೋಜ್ ಕುಮಾರ್ ಮತ್ತು ಸ್ಥಳೀಯ ಕಾರ್ಪೊರೇಟರ್ ಲೋಕೇಶ್ ಬೊಳ್ಳಾಜೆ ಅವರೊಂದಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ವಾರ್ಡ್ ಅಧ್ಯಕ್ಷ ಶಾಂತಕುಮಾರ್, ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ದಿನಕರ್ ಇಡ್ಯಾ, ಎಸ್‌ಸಿ ಮೋರ್ಚಾ ಮಂಡಲ ಅಧ್ಯಕ್ಷ ಹರೀಶ್ ಪಣಂಬೂರು, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಪ್ನಾ ಸುನಿಲ್, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಸದಸ್ಯ ಪ್ರೇಮ್ ಡಿ’ಸೋಜ, ಮಂಡಲ ಸದಸ್ಯೆ ಶೈಲಜಾ ಗಣೇಶ್ ಕಟ್ಟೆ, ಬಿಜೆಪಿ ಪ್ರಮುಖರಾದ ಗಣೇಶ್, ಆರತಿ ಕಾರ್ಯಕರ್ತರು ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.