
ಸರಕಾರಿ ಶಾಲೆಯಲ್ಲಿ ಕಳ್ಳತನಕ್ಕೆ ಯತ್ನ: ಬರಿಗೈಯಲ್ಲಿ ವಾಪಸಾದ ಕಳ್ಳರು
Tuesday, December 17, 2024
ಮುಲ್ಕಿ: ಕಿನ್ನಿಗೋಳಿ ಸಮೀಪದ ಪದ್ಮನೂರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲೆಯಲ್ಲಿ ಕಳ್ಳರು ಕಳ್ಳತನಕ್ಕೆ ಯತ್ನಿಸಿ ಏನೂ ಸಿಗದೆ ಬರಿಗೈಯಲ್ಲಿ ವಾಪಸಾಗಿದ್ದಾರೆ.
ಸೋಮವಾರ ಬೆಳಿಗ್ಗೆ ಶಾಲೆಯ ಮೈದಾನದಲ್ಲಿ ಸ್ಥಳೀಯರೊಬ್ಬರು ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಕೊಠಡಿಯ ಬೀಗ ಮುರಿದಿದ್ದು ಕಂಡು ಕೂಡಲೇ ಶಾಲಾ ಮುಖ್ಯೋಪಾಧ್ಯಾಯರಿಗೆ ತಿಳಿಸಿದ್ದಾರೆ.
ಕಳ್ಳರು ಶಾಲೆಯ ಎರಡು ಕೊಠಡಿಗಳ ಬೀಗವನ್ನು ಮುರಿದು ಕೊಠಡಿಯಲ್ಲಿದ್ದ ಕಪಾಟು ಳನ್ನು ಜಾಲಾಡಿ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿ ಏನೂ ಸಿಕ್ಕದೆ ಬರಿಗೈಯಲ್ಲಿ ಹೋಗಿದ್ದಾರೆ.
ಶಾಲಾ ಮುಖ್ಯೋಪಾಧ್ಯಾಯರು ನೀಡಿದ ದೂರಿನಂತೆ ಸ್ಥಳಕ್ಕೆ ಮುಲ್ಕಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.