ಎಂಎಲ್‌ಸಿ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹ

ಎಂಎಲ್‌ಸಿ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹ


ಉಳ್ಳಾಲ: ನೀರಿನ ವಿಚಾರಕ್ಕೆ ಸಂಬಂಧಿಸಿ ಹರೇಕಳ ಗ್ರಾಮದಲ್ಲಿ ನಡೆದ ಹಲ್ಲೆ ಪ್ರಕರಣದ ಸಮಗ್ರ ತನಿಖೆ ನಡೆಸಿ ನ್ಯಾಯ ದೊರಕಿಸುವಂತೆ ಒತ್ತಾಯಿಸಿ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿರುವ ಎಂಎಲ್‌ಸಿ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಸೋಮವಾರ ಕೊಜಪಾಡಿ ನಿವಾಸಿಗಳು ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದಾರೆ.

ಹರೇಕಳ ಗ್ರಾಮದ ಎರಡನೇ ವಾರ್ಡ್ ಕೊಜಪಾಡಿ ಸೈಟ್‌ನಲ್ಲಿ ಶುಕ್ರವಾರ ನೀರು ಆಪರೇಟರ್ ಹಾಗೂ ಸ್ಥಳೀಯ ನಿವಾಸಿ ಶರತ್ ನಡುವೆ ಹಲ್ಲೆ ಪ್ರಕರಣ ನಡೆದು ಕೊಣಾಜೆ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿತ್ತು. ಅಲ್ಲದೆ ಗ್ರಾಮ ಪಂಚಾಯಿತಿಯ ಸ್ಥಳೀಯ ಸದಸ್ಯ ಹಾಗೂ ಇತರರ ಮೇಲೂ ಕೇಸು ದಾಖಲಿಸಲಾಗಿತ್ತು. 

ಈ ಘಟನೆ ನಡೆದ ಬಳಿಕ ಸ್ಥಳೀಯ ವಾರ್ಡ್‌ನಲ್ಲಿ ನೀರು ಆಪರೇಟರ್ ಇಲ್ಲದೆ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಗ್ರಾಮ ಪಂಚಾಯಿತಿಗೆ ದೌಡಾಯಿಸಿ ಸಮಸ್ಯೆ ಪರಿಹರಿಸಲು ಹಾಗೂ ಘಟನೆಗೆ ಸಂಬಂಧಿಸಿ ವಿದಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಕೋಮು ಪ್ರಚೋದನಾಕಾರಿ ಹೇಳಿಕೆ ನೀಡಿದ್ದು ಅವರ ವಿರುದ್ಧ ಕೇಸು ದಾಖಲಿಸುವಂತೆ ಒತ್ತಾಯಿಸಿದರು. 

ಈ ಹಿಂದೆಯೂ ಮೂರು ಬಾರಿ ಶರತ್ ಆವರಿಂದಾಗಿ ಸಮಸ್ಯೆ ಎದುರಾಗಿದೆ. ಈಗ ನೀರು ಆಪರೇಟರ್ ಮೇಲೆ ಹಲ್ಲೆ ನಡೆಸಲಾಗಿದ್ದು ಸ್ಥಳಕ್ಕೆ ಹೋದ ಪಂಚಾಯಿತಿ ಸದಸ್ಯ ಅನೀಸ್, ಇತರರು ಮಾತ್ರವಲ್ಲದೆ ಸ್ಥಳದಲ್ಲಿ ಇಲ್ಲದವರ ಮೇಲೂ ಕೇಸು ದಾಖಲಿಸಿದ್ದು ಯಾವ ನ್ಯಾಯ?.

ನಮಗೆ ಎಲ್ಲರೂ ಸಮಾನರು, ಸ್ಥಳೀಯ ಭಾಗದಲ್ಲಿ ಎಲ್ಲಾ ಇತರ ಧರ್ಮೀಯರು ಸೌಹಾರ್ದದಿಂದ ಇದ್ದಾರೆ. ಆದರೆ ಈ ಘಟನೆಗೆ ಸಂಬಂಧಿಸಿ ವಿದಾನಪರಿಷತ್ ಸದಸ್ಯ ಪ್ರಚೋದನಾಕಾರಿ ಹೇಳಿಕೆ ನೀಡಿ ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ ಅವರ ವಿರುದ್ಧ ಗ್ರಾಮ ಪಂಚಾಯಿತಿಯಿಂದ ದೂರು ದಾಖಲಿಸಬೇಕು ಮನವಿ ಆಗ್ರಹಿಸಿದರು.

ಶುಕ್ರವಾರದಿಂದ ನೀರಿನ ಸಮಸ್ಯೆಯಾಗಿದ್ದು ತಕ್ಷಣ ಸರಿಪಡಿಸುತ್ತೇವೆ. ಶರತ್ ಎಂಬವರು ಟ್ಯಾಂಕ್‌ನಿಂದ ಅಕ್ರಮವಾಗಿ ನೀರು ಬಿಟ್ಟು ಖಾಲಿ ಮಾಡಿರುವುದು ತಪ್ಪು. ಪಂಚಾಯಿತಿ ಸದಸ್ಯ ಅನೀಸ್ ಮೇಲೆ ಕೇಸು ಖಂಡನೀಯ. ಎಂಎಲ್‌ಸಿ ವಿರುದ್ಧ ಕೇಸು ದಾಖಲಿಸುವಂತೆ ಹಾಗೂ ಪ್ರಕರಣದ ಕೂಲಂಕುಶ ತನಿಖೆ ನಡೆಸುವಂತೆ ಎಸಿಪಿಗೆ ಮನವಿ ಮಾಡಲಾಗುವುದು ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಪಿ. ಅಬ್ದುಲ್ ಮಜೀದ್ ಭರವಸೆ ನೀಡಿದರು. 

ಘಟನೆಯ ಬಗ್ಗೆ ಗ್ರಾಮ ಪಂಚಾಯಿತಿಯಿಂದ ಕ್ಷಮೆ ಕೇಳುತ್ತೇವೆ, ನ್ಯಾಯ ಒದಗಿಸುವ ಸಂಪೂರ್ಣ ಜವಾಬ್ದಾರಿ ನಮ್ಮದು. ಹಿಂದೆಯೂ ಮೂರು ಬಾರಿ ಇಂಥ ಘಟನೆ ನಡೆದಿದೆ. ಸಮಸ್ಯೆ ಬಗ್ಗೆ ಪಂಚಾಯಿತಿ ಗಮನಕ್ಕೆ ತರದ ಕಾರಣ ಘಟನೆ ನಡೆದಿದೆ. ಸ್ಥಳೀಯರ ಮನವಿ ಪರಿಗಣಿಸಿ ಹಾಗೂ ನಮ್ಮ ಗ್ರಾಮದ ಬಗ್ಗೆ ಕೋಮು ಪ್ರಚೋದನೆ ಹೇಳಿಕೆ ನೀಡಿದವರ ಮೇಲೆ ಕೇಸು ದಾಖಲಿಸುವಂತೆ ಪಂಚಾಯಿತಿ ಕಡೆಯಿಂದ ಎಸಿಪಿಗೆ ದೂರು ಸಲ್ಲಿಸುತ್ತೇವೆ.

ಗ್ರಾಮದಲ್ಲಿ ಎಲ್ಲರೂ ಸಮಾನರು, ಎಲ್ಲಿಂದಲೋ ಬಂದು ಹೇಳಿಕೆ ಕೊಟ್ಟು ಬೆಂಕಿ ಕೊಡಬೇಡಿ ಎಂದು ಮಾಜಿ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ ಅಸಮಾಧಾನ ವ್ಯಕ್ತಪಡಿಸಿದರು.

ಘಟನೆಗೆ ಸಂಬಂಧಿಸಿ ಎರಡೂ ಕಡೆ ಕೇಸು ದಾಖಲಾಗಿದ್ದು ತಕ್ಷಣಕ್ಕೆ ಆರೋಪಿ ಆಗುವುದಿಲ್ಲ, ಸಾಕ್ಷಿ ಸಂಗ್ರಹಿಸಿ ಬಳಿಕ ಅಂತಿಮ ವರದಿ ಹಾಕುತ್ತೇವೆ. ಪೊಲೀಸರ ಮೇಲೆ ವ್ಯರ್ಥ ಆರೋಪ ಹೊರಿಸಬೇಡಿ. ಈ ಹಿಂದೆ ಇಂಥ ಘಟನೆ ನಡೆದಿರುವ  ಮಾಹಿತಿ ನಮಗಿಲ್ಲ ಎಂದು ತಿಳಿಸಿದರು. 

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಮನವಿ ಸ್ವೀಕರಿಸಿದರು. ಸದಸ್ಯರಾದ ಅಬ್ದುಲ್ ಸತ್ತಾರ್ ಬಾವಲಿಗುರಿ, ಅಬೂಬಕ್ಕರ್ ಸಿದ್ದೀಕ್, ಎಸ್.ಎಂ.ಬಶೀರ್ ಜೊತೆಗಿದ್ದರು. ಸ್ಥಳೀಯ ಪ್ರಮುಖರಾದ ಶಬನಾ, ಫೌಝಿಯಾ, ಸಕೀನಾ, ನಸ್ಲೀನ, ಆಯಿಶಾ, ಝೀನತ್, ಜಮೀಲಾ, ಝೊಹರಾ, ಸುಲ್ತಾನ್, ಸತ್ತಾರ್, ಬಶೀರ್, ಇಬ್ರಾಹಿಂ, ರಫೀಕ್, ನಿಸಾರ್, ನಝೀರ್, ರಿಯಾಝ್ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article