ಸೇತುವೆ ನಿರ್ಮಾಣ: ಕಾಂಗ್ರೆಸ್ ವತಿಯಿಂದ ಸಂಭ್ರಮಾಚರಣೆ
ಉಳ್ಳಾಲ: ಉಳ್ಳಾಲ ಭಾಗದ ಜನರು ಮಂಗಳೂರಿನಿಂದ ದೋಣಿಯ ಮೂಲಕ ಸರಕು, ಸರಂಜಾಮುಗಳನ್ನು ತರುತ್ತಿದ್ದರು. ಗತಕಾಲದ ವೈಭವ ಮರಳಿ ತರುವ ನಿಟ್ಟಿನಲ್ಲಿ ಸೇತುವೆ ನಿರ್ಮಾಣಕ್ಕೆ ಶಾಸಕರು ಮುಂದಾಗಿದ್ದು, ಇದರಿಂದ ಮೀನುಗಾರರಿಗೂ ಅನುಕೂಲವಾಗಲಿದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ಹೇಳಿದರು.
ಅವರು ಉಳ್ಳಾಲದ ಕೋಟೆಪುರದಿಂದ ಬೋಳಾರದವರೆಗೆ ನೇತ್ರಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ 200 ಕೋಟಿ ಅನುದಾನ ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ಸೋಮವಾರ ಉಳ್ಳಾಲ ಅಬ್ಬಕ್ಕ ವೃತ್ತದಿಂದ ಕೋಟೆಪುರದವರೆಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಖಾದರ್ ಅಭಿಮಾನಿಗಳ ಸಂಭ್ರಮಾಚರಣೆಯ ಮೆವರಣಿಗೆಗೆ ಉಳ್ಳಾಲ ಅಬ್ಬಕ್ಕ ವೃತ್ತದ ಚಾಲನೆ ನೀಡಿ ಮಾತನಾಡಿದರು.
ಯು.ಟಿ. ಖಾದರ್ ವಿಧಾನಸಭೆಯ ಅಧ್ಯಕ್ಷರಾದ ಬಳಿಕ ಒಂದೇ ವರ್ಷದಲ್ಲಿ ಕ್ಷೇತ್ರದ ಸರ್ವ ಬೇಡಿಕೆಗಳನ್ನು ಈಡೇರಿಸಿದ್ದಾರೆ, ಕೋಟೆಪುರದಿಂದ ಬೋಳಾರಕ್ಕೆ ಸೇತುವೆ ನಿರ್ಮಾಣ ಯೋಜನೆ ಐತಿಹಾಸಿಕ ಕಾರ್ಯಕ್ರಮ ಎಂದು ಅಭಿಪ್ರಾಯಪಟ್ಟರು.
ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಪ್ರಮುಖರಾದ ಫಾರೂಕ್ ಉಳ್ಳಾಲ್, ಅಶ್ರಫ್ ಕೆ.ಸಿ. ರೋಡು, ಮುಸ್ತಫಾ ಅಬ್ದುಲ್ಲಾ, ಉಸ್ಮಾನ್ ಕಲ್ಲಾಪು, ಆಲ್ವಿನ್ ಡಿ’ಸೋಜ, ಚಂದ್ರಿಕಾ ರೈ, ಯೂಸುಫ್ ಉಳ್ಳಾಲ್, ದಿನೇಶ್ ರೈ, ಸುರೇಖಾ ಚಂದ್ರಹಾಸ, ಹಮೀದ್ ಕೋಡಿ, ರಶೀದ್ ಕೋಡಿ, ಶಶಿಕಲಾ ಸಪ್ನಾ ಹರೀಶ್, ನಾಸೀರ್ ಅಹ್ಮದ್ ಸಾಮಣಿಗೆ, ಅಶ್ರಫ್, ಯು.ಎ ಇಸ್ಮಾಯಿಲ್, ಅಝೀಝ್, ಮೊಹಮ್ಮದ್ ಮೋನು ಮಲಾರ್, ಮನ್ಸೂರ್ ಮಂಚಿಲ, ಪುರುಷೋತ್ತಮ್ ಪಿಲಾರ್, ಆಲ್ವಿನ್ ಡಿ’ಸೋಜ, ದಿನೇಶ್ ಕುಂಪಲ, ಬಶೀರ್ ಕೊಳಂಗರೆ ಮತ್ತಿತರರು ಉಪಸ್ಥಿತರಿದ್ದರು.
ಯು.ಪಿ. ಅಯೂಬ್ ಮಂಚಿಲ ಸ್ವಾಗತಿಸಿದರು.