ಪವರ್ ಫ್ರೆಂಡ್ಸ್‌ನಿಂದ ಬೃಹತ್ ಆರೋಗ್ಯ ಮತ್ತು ಬಂಜೆತನ ತಪಾಸಣೆ

ಪವರ್ ಫ್ರೆಂಡ್ಸ್‌ನಿಂದ ಬೃಹತ್ ಆರೋಗ್ಯ ಮತ್ತು ಬಂಜೆತನ ತಪಾಸಣೆ


ಮೂಡುಬಿದಿರೆ: ಪವರ್ ಫ್ರೆಂಡ್ಸ್ ಮೂಡುಬಿದಿರೆ, ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ ಹಾಗೂ ಸಮಾಜಮಂದಿರ ಸಭಾ ಮೂಡುಬಿದಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಸೆರಾಕೇರ್ ಸಂಸ್ಥೆಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ನೋವಾ ಐ.ವಿ.ಎಫ್. ಸಂಸ್ಥೆಯಿಂದ ಬಂಜೆತನ ತಪಾಸಣಾ ಶಿಬಿರವು ಇಲ್ಲಿನ ಸಮಾಜಮಂದಿರ ಸಭಾದ ಸ್ವರ್ಣ ಮಂದಿರದಲ್ಲಿ ನಡೆಯಿತು.


ಅದಾನಿ ಗ್ರೂಪ್‌ನ ಅಧ್ಯಕ್ಷ ಕಿಶೋರ್ ಆಳ್ವ ಅವರು ದೀಪ ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿ, ಇಂತಹ ಶಿಬಿರಗಳಿಂದ ಜನರಿಗೆ ಸಹಕಾರಿಯಾಗುತ್ತದೆ. ಸೇವಾ ಮನೋಭಾವವುಳ್ಳ ಸಂಘಟನೆಯಿಂದ ಇನ್ನೂ ಹೆಚ್ಚಿನ ಕಾಯ೯ಗಳು ಆಗಲಿ ಎಂದು ಶುಭ ಹಾರೈಸಿದರು. 


ಮಾಜಿ ಸಚಿವ, ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯದರ್ಶಿ ಸುರೇಶ್ ಪ್ರಭು, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಬಿಂದಿಯಾ ಶರತ್ ಶೆಟ್ಟಿ, ಪವರ್ ಫ್ರೆಂಡ್ಸ್ ಅಧ್ಯಕ್ಷ ವಿನಯ ಕುಮಾರ್, ಮಹಿಳಾ ಘಟಕದ ಲತಾ ಸುರೇಶ್, ನೋವಾ ಐ.ವಿ.ಎಫ್. ಸಂಸ್ಥೆಯ ವೈದ್ಯ ಡಾ. ಶವೀಝ್ ಫೈಝಿ, ಸೆರಾಕೇರ್ ಸಂಸ್ಥೆಯ ಸ್ವಾತಿ, ಹಿರಿಯ ನ್ಯಾಯವಾದಿ ಕೆ.ಆರ್. ಪಂಡಿತ್, ಪವರ್ ಫ್ರೆಂಡ್ಸ್ ಸಂಸ್ಥೆಯ ಬಹುತೇಕ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. 


ಸೆರಾಕೇರ್ ಸಂಸ್ಥೆಯಿಂದ 149 ಮತ್ತು 52 ಮಂದಿ ಬಂಜೆತನ ತಪಾಸಣೆ ಮಾಡಿಸಿಕೊಂಡರು. ಸುಧಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article