
ಅಪ್ರಾಪ್ತ ವಯಸ್ಸಿನ ಬಾಲಕಿ ಅತ್ಯಾಚಾರ; ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ-ಆರೋಪಿಗೆ 20 ವರ್ಷ ಕಠಿಣ ಸಜೆ ಮತ್ತು 1ಲಕ್ಷ ದಂಡ
ಮುಲ್ಕಿ: ಕಿನ್ನಿಗೋಳಿ ಮೂಲದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪರಿಚಯಿಸಿಕೊಂಡು ಸ್ನೇಹ ಬೆಳೆಸಿ ಪುಸಲಾಯಿಸಿದ ಆರೋಪಿ ಹೆಬ್ರಿ ಸಮೀಪದ ಮುದ್ರಾಡಿ ನಿವಾಸಿ ಅಶ್ವಥ್ (23)ಎಂಬಾತನಿಗೆ ಮಂಗಳೂರಿನ ಜೆಲ್ಲಾ ಮತ್ತು ಸೆಷನ್ (FTSC -2) ನ್ಯಾಯಾಲಯ 20 ವರ್ಷ ಕಠಿಣ ಸಜೆ ಮತ್ತು 1ಲಕ್ಷ ದಂಡ ವಿಧಿಸಿದೆ.
ಆರೋಪಿ ಹೆಬ್ರಿ ಸಮೀಪದ ಮುದ್ರಾಡಿ ಮೂಲದ ಅಶ್ವಥ್ (23) ಎಂಬಾತ ಇನ್ಸ್ಟಾಗ್ರಾಮ್ ಸಾಮಾಜಿಕ ಜಾಲತಾಣದ ಮೂಲಕ
ಕಿನ್ನಿಗೋಳಿ ಮೂಲದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪರಿಚಯಿಸಿಕೊಂಡು ಸ್ನೇಹ ಬೆಳೆಸಿ ಪುಸಲಾಯಿಸಿ ಕಳೆದ 2023ನೇ ಮಾರ್ಚ್ 15ರಂದು ತನ್ನ ಮೋಟಾರ್ ಸೈಕಲ್ ನಲ್ಲಿ ಮುಲ್ಕಿಯಿಂದ ಅಪಹರಿಸಿ ಕೊಂಡು ಹೋಗಿ ಮಣಿಪಾಲದ ಲಾಡ್ಜ್ ನಲ್ಲಿ ಅತ್ಯಾಚಾರ ವೆಸಗಿ ಮೊಬೈಲ್ ಫೋನ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ರವಾನೆ ಮಾಡಿದ್ದು, ನೊಂದ ಬಾಲಕಿಯ ಪೋಷಕರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದಂತೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅಕ್ರ: 22/2023 ಕಲಂ 363,376 IPC. 4 & 6 ಫೋಸ್ಕೋ 67(b) ಐಟಿ ಆಕ್ಟ್ ಪ್ರಕರಣ ದಾಖಲಾಗಿತ್ತು.
ಪ್ರಕರಣದವಿಚಾರಣೆ ನಡೆಸಿದ ಮಂಗಳೂರಿನ ಜೆಲ್ಲಾ ಮತ್ತು ಸೆಷನ್ (FTSC -2) ನ್ಯಾಯಾಲಯದ ನ್ಯಾಯಾಧೀಶ ಮಾನು. ಎಸ್ ರವರು ಜ 17ರಂದು ಆರೋಪಿಗೆ ಕಲಂ 06 ಪೋಸ್ಕೋ ಕಾಯ್ದೆಯಡಿ 20 ವರ್ಷ ಕಠಿಣ ಕಾರವಾಸ ಹಾಗೂ 67(ಬಿ)ಐಟಿ ಕಾಯ್ದೆಯಡಿ 1ಲಕ್ಷ ದಂಡ ವಿಧಿಸಿ ಅದೇಶಿಸಿರುತ್ತಾರೆ.
ಪ್ರಕರಣದ ಸಂಪೂರ್ಣ ತನಿಖೆಯನ್ನು ನಡೆಸಿ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿಯನ್ನು ಮುಲ್ಕಿ ಠಾಣಾ ಪೊಲೀಸ್ ನೀರಿಕ್ಷಕರಾದ ವಿದ್ಯಾಧರ್ ಡಿ ಬಾಯ್ಕೆರಿಕರ್ ರವರು ಸಲ್ಲಿಸಿದ್ದು. ತನಿಖಾ ಸಹಾಯಕರಾಗಿ ಎ ಎಸ್ ಐ ಸಂಜೀವ ಎ. ಪಿ.ರವರು ಸಹಕರಿಸಿರುತ್ತಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಬದ್ರಿನಾಥ್ ನಾಯರಿ* ರವರು ಸಾಕ್ಷಿಗಳನ್ನು ಸಾಕ್ಷಿ ವಿಚಾರಣೆ ಮಾಡಿ ವಾದ ಮಂಡಿಸಿರುತ್ತಾರೆ.